ಮರ್ಸಿಡಿಸ್ ಬೆಂಜ್... ಒಂದು ಕಾರು ಖರೀದಿಸೋದೇ ಎಷ್ಟೋ ಜನರ ಕನಸು. ಅಂಥದ್ದರಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ, ಒಂದೇ ಸಲ ಎರಡು ಮರ್ಸಿಡಿಸ್ ಬೆಂಜ್ ಖರೀದಿಸಿದ್ದಾರೆ. ಒಂದು ಬಿಳಿ ಬಣ್ಣದ ಬೆಂಜ್ ಕಾರಾದರೆ, ಇನ್ನೊಂದು ಆಕಾಶ ನೀಲಿ ಬಣ್ಣದ್ದು. ಅಫ್‍ಕೋರ್ಸ್.. ಅದಕ್ಕೆ ಕಾರಣವೂ ಇದೆ.
ಅವರ ಪತ್ನಿ ವಿದ್ಯಾಗೆ ಒಂದು ಕಾರ್‍ನ್ನು ಗಿಫ್ಟ್ ಕೊಡಬೇಕು ಎನ್ನುವುದು ಶ್ರೀಮುರಳಿ ಕನಸಾಗಿತ್ತು. ಆ ಕನಸು ಈಗ ಈಡೇರಿದೆ. ನೇವಿ ಬ್ಲೂ ಬೆಂಜ್‍ನ್ನು ಪತ್ನಿಗೆ ಗಿಫ್ಟ್ ಆಗಿ ಕೊಡುತ್ತಿರುವ ಶ್ರೀಮುರಳಿ, ವೈಟ್ ಬೆಂಜ್‍ನ್ನು ತಾವು ಇಟ್ಟುಕೊಳ್ಳಲಿದ್ದಾರಂತೆ.