` ಅನಂತ್‍ಗೆ ಶಂಕರ್ ನಾಗ್ ನೆನಪಿಸಿದ ರಿಷಬ್ ಶೆಟ್ಟಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ananth nag in rishab shetty's movie
Ananth Nag, Rishab Shetty Image

ಅನಂತ್‍ನಾಗ್‍ಗೆ ಶಂಕರ್ ನಾಗ್ ಎಂದೆಂದೂ ಮರೆಯಲು ಸಾಧ್ಯವೇ ಇಲ್ಲವೇನೊ.. ಅವರ ಜೀವನದ ಸ್ಫೂರ್ತಿ ಮತ್ತು ಬದುಕು ಎರಡೂ ಆಗಿದ್ದ ಶಂಕರ್‍ನಾಗ್‍ರನ್ನು ಅನಂತ್ ನೆನಪಿಸಿಕೊಳ್ಳುವುದೂ ಹೊಸದೇನಲ್ಲ. ಆದರೆ ರಿಷಬ್ ಶೆಟ್ಟಿಯವರ ಜೊತೆ ನಟಿಸುವಾಗ, ಅನಂತ್‍ಗೆ ಶಂಕರ್‍ನಾಗ್ ನೆನಪಾಗಿದೆ. ಅದರ ಕ್ರೆಡಿಟ್ಟು, ಸ್ವತಃ ರಿಷಬ್‍ಗೇ ಸಲ್ಲಬೇಕು. ಅದಕ್ಕೆ ಕಾರಣವಾಗಿರೋದು ಒಂದು ದೃಶ್ಯ.

ರಿಷಬ್ ಅವರ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ಚಿತ್ರದಲ್ಲಿ ಅನಂತ್‍ನಾಗ್ ಪ್ರಮುಖ ಪಾತ್ರದಲ್ಲಿದ್ದಾರೆ. ಆ ಚಿತ್ರದಲ್ಲಿ 15 ನಿಮಿಷದ ಒಂದು ದೃಶ್ಯವನ್ನ ಒಂದೇ ಶಾಟ್‍ನಲ್ಲಿ ಚಿತ್ರೀಕರಿಸಲು ರಿಷಬ್ ನಿರ್ಧರಿಸಿದರಂತೆ. ಅವರಿಗೆ ಅನಂತ್‍ನಾಗ್ ಮೇಲೆ ವಿಶ್ವಾಸ. ಅದಕ್ಕೆ ಧಕ್ಕೆಯಾಗದಂತೆ ಅನಂತ್, ಇಡೀ ಶಾಟ್‍ನ್ನು ಒಂದೇ ಟೇಕ್‍ನಲ್ಲಿ ಮುಗಿಸಿಯೂಬಿಟ್ಟರಂತೆ. 

ಆ ದೃಶ್ಯದ ಚಿತ್ರೀಕರಣ ನಡೆಯುವಾಗ ನನಗೆ ಶಂಕರ್ ನೆನಪಾಗಿದ್ದ. ಅವನೂ ಹೀಗೆಯೇ ಕೆಲವು ಶಾಟ್‍ಗಳನ್ನ ಇಡ್ತಾ ಇದ್ದ ಎಂದು ಗತಕಾಲಕ್ಕೆ ಜಾರುವ ಅನಂತ್‍ನಾಗ್, ಶಂಕರ್ ಜೊತೆ ಸ್ಟೇಜ್‍ನಲ್ಲಿ ಕಳೆದ ಕ್ಷಣಗಳನ್ನೂ ಮೆಲುಕು ಹಾಕುತ್ತಾರೆ. ಸಿನಿಮಾದಲ್ಲಿ ಅನಂತ್ ಅವರದ್ದು ಸೀರಿಯಸ್ ಮೇಷ್ಟ್ರ ಪಾತ್ರವಲ್ಲ, ತುಂಟ ಮೇಷ್ಟರ ಪಾತ್ರ. ಗೌರಿ ಗಣೇಶ, ಗಣೇಶನ ಮದುವೆಯ ತುಂಟ ಅನಂತ್‍ನಾಗ್‍ರನ್ನು ಸಿನಿಮಾದಲ್ಲಿ ನೋಡಬಹುದಂತೆ. ಮಕ್ಕಳ ನಡುವೆ ಮಕ್ಕಳಾಗಿ ನಟಿಸಿದ್ದಾರೆ ಅನಂತ್ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ ನಿರ್ದೇಶಕ ರಿಷಬ್ ಶೆಟ್ಟಿ.