ಅಂಬಿ ನಿಂಗೆ ವಯಸ್ಸಾಯ್ತೊ... ಬಹಳ ವರ್ಷಗಳ ನಂತರ ಅಂಬರೀಷ್ ಪೋಷಕ ಪಾತ್ರ ಬಿಟ್ಟು, ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾ. ಅಂಬರೀಷ್ ಅವರನ್ನು ಹೀರೋ ಮಾಡಿರುವ ಜಾಕ್ ಮಂಜು, ಯಂಗ್ ಅಂಬರೀಷ್ ಪಾತ್ರದಲ್ಲಿ ತೋರಿಸಿರೋದು ಸುದೀಪ್ ಅವರನ್ನ.
ಚಿತ್ರದಲ್ಲಿ ಸುದೀಪ್ ಹೇಗೆ ಕಾಣ್ತಾರೆ ಅನ್ನೋಕ್ಕೆ ಇನ್ನೊಂದು ಫೋಟೋ ಹೊರಗೆ ಬಿಟ್ಟಿದ್ದಾರೆ. ಅದರಲ್ಲಿ ಸುದೀಪ್ ಮತ್ತು ಶೃತಿ ಹರಿಹರನ್, ಅಪ್ಪಟ ಹಳ್ಳಿಯ ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದಾರೆ. ಸುದೀಪ್ ಮತ್ತು ಶೃತಿ, ಇಬ್ಬರಿಗೂ ಇಂಥಾದ್ದೊಂದು ಲುಕ್ ಹೊಸದೇ.. ಹೀಗಾಗಿಯೇ ಪೋಸ್ಟರ್ನಲ್ಲಿ ಫ್ರೆಶ್ನೆಸ್ ಇದೆ.
ಗುರುದತ್ ನಿರ್ದೇಶನದ ಚಿತ್ರದಲ್ಲಿ 2 ಕಥೆಗಳಿವೆ. ಒಂದು 70-80ರ ದಶಕದ ಕಥೆ. ಇನ್ನೊಂದು ಈಗಿನ ಕಥೆ. 70ರ ದಶಕಕ್ಕೆ ಸುದೀಪ್, ಈಗಿನ ಕಾಲಕ್ಕೆ ಅಂಬರೀಷ್. ಸ್ಸೋ.. ಅಂಬಿಗೆ ವಯಸ್ಸಾಗುವ ಮುನ್ನ.. ಸುಹಾಸಿನಿಗೂ ವಯಸ್ಸಾಗೋ ಮೊದಲು, ತೆರೆ ಮೇಲೆ ಕಾಣಿಸಿಕೊಳ್ಳೋದು ಸುದೀಪ್ ಮತ್ತು ಶೃತಿ. ಚಿತ್ರ ಆಗಸ್ಟ್ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.