` ಕಿಚ್ಚ ಮೆಚ್ಚಿದ 6ನೇ ಮೈಲಿ ಸ್ಪೆಷಾಲಿಟಿ ಏನು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
6ne malli movie highlights
6ne Malli Movie Image

ಕಿಚ್ಚ ಸುದೀಪ್, 6ನೇ ಮೈಲಿ ಚಿತ್ರದ ಟ್ರೇಲರ್‍ನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಟ್ರೇಲರ್, ಸುದೀಪ್‍ರನ್ನು ಅಷ್ಟರಮಟ್ಟಿಗೆ ಇಂಪ್ರೆಸ್ ಮಾಡಿತ್ತು. 6ನೇ ಮೈಲಿಯಲ್ಲಿರುವುದು ಸಸ್ಪೆನ್ಸ್ ಥ್ರಿಲ್ಲರ್ ಕಥೆ. ಮಧ್ಯರಾತ್ರಿ ಟ್ರಕ್ಕಿಂಗ್‍ಗೆಂದು ಹೋಗುವ ಎರಡು ತಂಡಗಳು, ಅವುಗಳ ಹುಡುಕಾಟ, ಚಾರಣಿಗರಿಗೆ ಕಾಡಿನಲ್ಲಿ ಎದುರಾಗುವ ಅಪಾಯಗಳು, ವಿಶಿಷ್ಟ ಘಟನೆಗಳೇ ಚಿತ್ರದ ಕಥಾವಸ್ತು.

ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್, ಚಿತ್ರದಲ್ಲಿ ರಗಡ್ ಲುಕ್‍ನಲ್ಲಿ ನಟಿಸಿದ್ದಾರೆ.ಅವರದ್ದು ಇಲ್ಲಿ ಡಿಟೆಕ್ಟಿವ್ ಪಾತ್ರ. ನಕ್ಸಲರು, ಡಕಾಯಿತರು ಎಲ್ಲರೂ ಚಿತ್ರದಲ್ಲಿ ಬರುತ್ತಾರೆ. ಕ್ಷಣ ಕ್ಷಣಕ್ಕೂ ಸಿನಿಮಾ ನೋಡುಗರಿಗೆ ಥ್ರಿಲ್ ಕೊಡುತ್ತೆ ಅನ್ನೋದು ನಿರ್ದೇಶಕ ಸೀನಿಯ ಭರವಸೆ.

ಆರ್‍ಜೆ ನೇತ್ರ, ಜಾಹ್ನವಿ, ಹೇಮಂತ್ ಕುಮಾರ್, ಮೈತ್ರಿ, ಜಗ್ಗಿ ನಟಿಸಿರುವ ಚಿತ್ರಕ್ಕೆ ಸಂಗೀತ ನೀಡಿರುವುದು ಸಾಯಿಕಿರಣ್. ವೃತ್ತಿಯಲ್ಲಿ ವೈದ್ಯರಾಗಿರುವ ಶೈಲೇಶ್ ಕುಮಾರ್, ಚಿತ್ರದ ನಿರ್ಮಾಪಕರು.

India Vs England Pressmeet Gallery

Odeya Audio Launch Gallery