` ಇದು, ಹೀರೋಗಳೇ ಇಲ್ಲದ ಸಿನಿಮಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
6 ne malli movie is without hero
6ne Malli Movie Image

ಒಂದು ಸಿನಿಮಾ ಎಂದ ಮೇಲೆ ಚಿತ್ರಕ್ಕೊಬ್ಬ ಹೀರೋ ಇರಬೇಕು, ಹೀರೋಯಿನ್ ಇರಬೇಕು. ಅವರಿಬ್ಬರ ಮಧ್ಯೆ ಪ್ರೀತಿಯೋ ದ್ವೇಷವೋ ಹುಟ್ಟಿಕೊಳ್ಳಲೇಬೇಕು. ಇದು ಸಿನಿಮಾ ಸೂತ್ರ. ಆದರೆ, ಈ ಸಿದ್ಧ ಸೂತ್ರಗಳನ್ನೆಲ್ಲ ಬ್ರೇಕ್ ಮಾಡಲು ಹೊರಟಿರುವುದು 6ನೇ ಮೈಲಿ ಸಿನಿಮಾ. 

ನಮಗೆ 8ನೇ ಮೈಲಿ ಗೊತ್ತಪ್ಪ, ಬೆಂಗಳೂರು-ತುಮಕೂರು ಹೈವೇ ಮಧ್ಯೆ ಬರುತ್ತೆ. ದಾಸರಹಳ್ಳಿ ನೆಕ್ಸ್ಟ್ ಸ್ಟಾಪು 8ನೇ ಮೈಲಿ ಅಂತೀರಾ.. ಅದು ಏರಿಯಾ.. ಇದು ಸಿನಿಮಾ. ಸಿನಿಮಾ ಹೆಸರೇ 6ನೇ ಮೈಲಿ.

6ನೈ ಮೈಲಿ, ನೈಜ ಘಟನೆ ಆಧರಿಸಿದ ಸಿನಿಮಾ. ಅಪ್ಪಟ ಸಸ್ಪೆನ್ಸ್ ಥ್ರಿಲ್ಲರ್. ಸಂಚಾರಿ ವಿಜಯ್ ಪ್ರಮುಖ ಪಾತ್ರದಲ್ಲಿರುವ ಚಿತ್ರಕ್ಕೆ ಸಂಗೀತ ನೀಡಿರೋದು ಸಾಯಿ ಕಿರಣ್. 6ನೇ ಮೈಲಿ ಸಿನಿಮಾ, 6ನೇ ತಾರೀಕಿನಂದೇ ರಿಲೀಸ್ ಆಗುತ್ತಿರುವುದು ಸ್ಪೆಷಾಲಿಟಿ.

ಚಿತ್ರದ ಕಥೆ ಸಿಂಪಲ್. ಪಾರ್ಟಿ ಮಾಡೋಕೆಂದು ಘಾಟ್ ಸೆಕ್ಷನ್‍ಗೆ ಹೋದಾಗ ಅಲ್ಲಿ ನಡೆಯುವ ಅನಾಹುತಗಳೇ ಚಿತ್ರದ ಕಥಾವಸ್ತು. ಚಿತ್ರಕ್ಕೆ ಇಂಥವರೇ ಹೀರೋ ಅಂತಾ ಹೇಳೋಕಾಗಲ್ಲ. ಚಿತ್ರದ ಕಥೆ, ಚಿತ್ರಕಥೆಯೇ ಹೀರೋ. ಚಿತ್ರವನ್ನು ರಿವರ್ಸ್ ಆಗಿ ತೋರಿಸಲಾಗುತ್ತೆ. ಇದು ಚಿತ್ರದ ಕುತೂಹಲವನ್ನು ಹೆಚ್ಚಿಸುತ್ತೆ ಎನ್ನುತ್ತೆ ಚಿತ್ರತಂಡ. ಜುಲೈ 6ಕ್ಕೆ ರಿಲೀಸ್ ಆಗಲಿರುವ ಸಿನಿಮಾ, ಅದೇ ಥ್ರಿಲ್‍ನ್ನು ಪ್ರೇಕ್ಷಕರಿಗೆ ಕೊಡಬೇಕು. ಹಾಗಾಗಿಬಿಟ್ಟರೆ, 6ನೇ ಮೈಲಿ 100ನೇ ಮೈಲಿಯಲ್ಲಿ ನಿಲ್ಲುತ್ತೆ.

Mugilpete Shooting Pressmeet In Sakleshpura

Odeya Audio Launch Gallery