ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ಹೊಸ ತಂತ್ರಜ್ಞಾನದ ನಾಗರಹಾವು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈಶ್ವರಿ ಪ್ರೊಡಕ್ಷನ್ಸ್ನಲ್ಲಿ ಮೂಡಿ ಬಂದಿದ್ದ ಚಿತ್ರಕ್ಕೆ, ನಿರ್ಮಾಪಕ ಈಶ್ವರ್ ಬಾಲಾಜಿ, ಹೊಸ ಟೀಸರ್ನ್ನೇ ಸಿದ್ಧ ಮಾಡಿಸಿದ್ದಾರೆ. ವಿಷ್ಣು ಅವರ ಕಟೌಟ್ನ್ನು ಗ್ರಾಫಿಕ್ಸ್ನಲ್ಲಿ ರೂಪಿಸಿರುವ ಬಾಲಾಜಿ, ಹೊಸ ನಾಗರಹಾವನ್ನು ಹೊಸದಾಗಿ ತೆರೆಗೆ ತರುತ್ತಿದ್ದಾರೆ. ಚಿತ್ರದ ಟೀಸರ್ನ್ನು ಬಿಡುಗಡೆ ಮಾಡಿರುವುದು ಕಿಚ್ಚ ಸುದೀಪ್.
ವಿಷ್ಣುವರ್ಧನ್ ಅವರ ನಾಗರಹಾವು ಚಿತ್ರದ ಬಿಡುಗಡೆ ಮಾಡುತ್ತಿರುವುದು ನನಗೆ ಸಿಕ್ಕ ಅತಿದೊಡ್ಡ ಗೌರವ ಎಂದು ಹೇಳಿಕೊಂಡಿರುವ ಸುದೀಪ್, ಚಿತ್ರಕ್ಕೆ ಶುಭ ಹಾರೈಸಿದ್ದಾರೆ.