ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ನಾಗತಿಹಳ್ಳಿಯವರು ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರು, ಕಲಾವಿದರು ತಂತ್ರಜ್ಞರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದ್ದು ವಿಶೇಷ.
ಹಿರಿಯ ನಟರಾದ ದತ್ತಣ್ಣ, ಅಕಾಡೆಮಿಯ ಮಾಜಿ ಅಧ್ಯಕ್ಷರಾದ ನಾಗಾಭರಣ, ನಿರ್ದೇಶಕರಾದ ಭಗವಾನ್, ನಂಜುಂಡೇಗೌಡ, ರಾಮದಾಸ ನಾಯ್ಡು, ಶಶಿಕುಮಾರ್, ಆದಿಚುಂಚನಗಿರಿ ಮಠದ ಸಿಇಒ ರಾಮಕೃಷ್ಣ ಗೌಡ ಸೇರಿದಂತೆ ಹಲವರು ನಾಗತಿಹಳ್ಳಿಯವರಿಗೆ ಶುಭ ಕೋರಿದರು.