` ನಟಸಾರ್ವಭೌಮನಲ್ಲೂ ಇರಲಿದೆ ಅಪ್ಪು ವಂಡರ್ಸ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
johnny master to choregraph puneeth again
Natasarvabhowma Song Shoot Image

ರಾಜಕುಮಾರ ಚಿತ್ರ, ಸೂಪರ್ ಡ್ಯೂಪರ್ ಹಿಟ್ ಆಗಿದ್ದಷ್ಟೇ ಅಲ್ಲ, ಪುನೀತ್ ರಾಜ್‍ಕುಮಾರ್ ಸ್ಟೆಪ್ಪುಗಳೂ ಪ್ರೇಕ್ಷಕರನ್ನು ಬೆರಗಾಗಿಸಿದ್ದವು. ಡ್ಯಾನ್ಸ್ ಅಪ್ಪು ಡ್ಯಾನ್ಸ್ ಅಂತೂ ಚಿಕ್ಕಮಕ್ಕಳಿಗೂ ಫೇವರಿಟ್ ಆಗಿ ಹೋಗಿತ್ತು. ಹೀಗೆ ಹೆಜ್ಜೆಗಳ ಮೂಲಕವೇ ಮೋಡಿ ಮಾಡಿದ್ದರ ಹಿಂದಿದ್ದವರು ಜಾನಿ ಮಾಸ್ಟರ್. ಅವರೀಗ ಮತ್ತೆ ಬಂದಿದ್ದಾರೆ. ನಟಸಾರ್ವಭೌಮನಿಗಾಗಿ.

ರಾಕ್‍ಲೈನ್ ನಿರ್ಮಾಣದ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶನವಿದೆ. ರಚಿತಾ ರಾಮ್ ನಾಯಕಿಯಾಗಿದ್ದು, ಬಿ.ಸರೋಜಾದೇವಿ ದಶಕಗಳ ನಂತರ ಬಣ್ಣ ಹಚ್ಚಿದ್ದಾರೆ. ಹೀಗೆ ಸ್ಪೆಷಲ್‍ಗಳ ಸ್ಪೆಷಲ್ ಹೊತ್ತಿರುವ ಚಿತ್ರಕ್ಕೆ ಈಗ ಜಾನಿ ಮಾಸ್ಟರ್ ಕ್ರೇಜ್. ಅಭಿಮಾನಿಗಳು, ಈ ಚಿತ್ರದಲ್ಲೂ ಅಪ್ಪು ಅವರಿಂದ ಅದ್ಭುತ ಡ್ಯಾನ್ಸ್ ನಿರೀಕ್ಷೆ ಮಾಡಬಹುದು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery