` ಕಡ್ಡಿಪುಡಿ ಚಂದ್ರು ಕೈಗೆ ಜುಗಾರಿ ಕ್ರಾಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kaddipudi chandr's next film is jugaru cross
Kaddipudi Chandru Image

ಜುಗಾರಿ ಕ್ರಾಸ್.. ಕನ್ನಡದ ಶ್ರೇಷ್ಟ ಸಾಹಿತಿಗಳಲ್ಲೊಬ್ಬರಾದ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಅಪೂರ್ವ ಕೃತಿಗಳಲ್ಲಿ ಒಂದು. ಈ ಕಥೆಯನ್ನು ಸಿನಿಮಾ ಮಾಡಬೇಕು ಎಂದು ಹೊರಟವರ ಸಂಖ್ಯೆ ಸಣ್ಣದಲ್ಲ. ಅದೆಷ್ಟು ಜನ ಪ್ರಯತ್ನಪಟ್ಟಿದ್ದಾರೋ.. ಲೆಕ್ಕವೇ ಇಲ್ಲ. ಆದರೆ, ಈ ಬಾರಿ ಜುಗಾರಿ ಕ್ರಾಸ್ ಸಿನಿಮಾ ಆಗಲು ಕಾಲ ಕೂಡಿ ಬಂದಿದೆ ಅನ್ನಿಸುತ್ತಿದೆ. ಏಕೆಂದರೆ, ಈ ಬಾರಿ ಚಿತ್ರವನ್ನು ಕೈಗೆತ್ತಿಕೊಂಡಿರುವುದು ಕಡ್ಡಿಪುಡಿ ಚಂದ್ರು.

ಹೊಸ ಹೀರೋ ಹಾಕಿಕೊಂಡು ಸಿನಿಮಾ ಮಾಡುವ ಯೋಜನೆ ಕಡ್ಡಿಪುಡಿ ಚಂದ್ರು ಅವರದ್ದು. ನಾಗಾಭರಣ ಅವರಿಗೆ ನಿರ್ದೇಶನದ ಹೊಣೆ ಹೊರಿಸಲಾಗಿದೆಯಂತೆ. ಕಥೆ, ಕಾದಂಬರಿಗಳನ್ನು ಸಿನಿಮಾ ಆಗಿಸುವುದರಲ್ಲಿ ಸಿದ್ಧಹಸ್ತರಾಗಿರುವ ನಾಗಾಭರಣ ಉತ್ತಮ ಆಯ್ಕೆಯೂ ಹೌದು. ಹೀರೋ ಆಯ್ಕೆ ಇನ್ನೂ ಆಗಿಲ್ಲ. ಉಳಿದಂತೆ ರಂಗಾಯಣ ರಘು, ಸಾಧುಕೋಕಿಲ, ತಾರಾ, ಚಿಕ್ಕಣ್ಣ ಮೊದಲಾದವರು ನಟಿಸಲಿದ್ದಾರೆ. ವೇಣು ಛಾಯಾಗ್ರಹಣ ಇರಲಿದೆ. ಸೆಪ್ಟೆಂಬರ್‍ನಲ್ಲಿ ಚಿತ್ರ ಶುರುವಾಗುವ ನಿರೀಕ್ಷೆ ಇದೆ.

Related Articles :-

T S Nagabharana To Direct 'Jugari Cross'

Jugari Cross Direcor Kodlu Deadline To Shivarajkumar

Jugari Cross Director Kodlu Wanted

Jugari Cross - Kodlu Diggeed His Own Grave

Jugari Cross Controversy - Shivarajkumar Hits Back

Babru Teaser Launch Gallery

Odeya Audio Launch Gallery