` ಶರಣ್ ಕೆರಿಯರ್‍ನಲ್ಲೇ ರ್ಯಾಂಬೋ2 ವಂಡರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rambo 2 does wonders at box office
Rambo 2 Movie Image

Rambo 2 ರಿಲೀಸ್ ಆದ ದಿನದಿಂದಲೂ ಬಾಕ್ಸಾಫೀಸ್‍ನಲ್ಲಿ ಚುಟುಚುಟು ಅಂತಾನೇ ಇದೆ. ಚುಮುಚುಮು ಮ್ಯಾಜಿಕ್ ಮಾಡಿರುವ ಸಿನಿಮಾ, 25 ದಿನ ಪೂರೈಸಿ 50ನೇ ದಿನಕ್ಕೆ ಮುನ್ನುಗ್ಗುತ್ತಿದೆ. ಇದು ಶರಣ್ ವೃತ್ತಿಜೀವನದಲ್ಲೇ ಅತಿದೊಡ್ಡ ಹಿಟ್ ಎನ್ನಲಾಗುತ್ತಿದೆ. ಸದ್ಯಕ್ಕೆ Rambo 2 ಹೋಗುತ್ತಿರುವ ಸ್ಪೀಡ್ ನೋಡಿದರೆ, 60ಕ್ಕೂ ಹೆಚ್ಚು ಕೇಂದ್ರಗಳಲ್ಲಿ 50 ದಿನ ಪೂರೈಸುವ ಸೂಚನೆ ಇದೆ.

ಸದ್ಯಕ್ಕೆ Rambo 2, 12 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆಯಂತೆ. ತಂತ್ರಜ್ಞರೇ ಬಂಡವಾಳ ಹೂಡಿ ನಿರ್ಮಿಸಿದ್ದ ಸಿನಿಮಾ ಇದಾಗಿತ್ತು. ನಾಯಕ ಶರಣ್, ಅಟ್ಲಾಂಟಾ ನಾಗೇಂದ್ರ, ತರುಣ್ ಸುಧೀರ್, ಅರ್ಜುನ್ ಜನ್ಯಾ, ಚಿಕ್ಕಣ್ಣ ಸೇರಿದಂತೆ.. ಎಲ್ಲರೂ ನಿರ್ಮಾಪಕರಾಗಿದ್ದರು. ಈಗ ಪ್ರತಿಯೊಬ್ಬ ನಿರ್ಮಾಪಕರ ಮೊಗದಲ್ಲೂ ನಗು.. ಚುಟುಚುಟು ಅನ್ನೋಕೆ ಶುರುವಾಗಿದೆ.