ಅವನೊಬ್ಬ ರೆಸಾರ್ಟ್ ಮಾಲೀಕ. ಅವಳು ಆ ರೆಸಾರ್ಟ್‍ಗೆ ಬರುವ ಅತಿಥಿ. ಅವರಿಬ್ಬರ ಮಧ್ಯೆ ಗೆಳೆತನ ಚಿಗುರೊಡೆದು, ಪ್ರೀತಿ ಶುರುವಾಗುತ್ತೆ. ಕಥೆಯೊಂದು ಶುರುವಾಗುವುದು ಹೀಗೆ... ಇಲ್ಲಿ ರೆಸಾರ್ಟ್ ಮಾಲೀಕ ದಿಗಂತ್. ಅತಿಥಿ ಪೂಜಾ.
ಏಕಾಂತ ಅರಸಿ ರೆಸಾರ್ಟ್‍ಗೆ ಬರುವ ನಾಯಕಿ, ತನ್ನದೇ ಕನಸುಗಳನ್ನು ಕೊಟ್ಟಿಕೊಂಡಿರುವ ನಾಯಕನ ಮಧ್ಯೆ ಕಥೆಯೊಂದು ಶುರು ಮಾಡಿರುವುದು ನಿರ್ದೇಶಕ ಸನ್ನಾ.
ಏನಾದರೂ ಮಾಡಿ, ಇವರಿಬ್ಬರ ಮಧ್ಯೆ ಚೆಂದದ ಲವ್ ಸ್ಟೋರಿ ಶುರು ಮಾಡಿಸಿ ಎಂದು ಹೇಳಿದ್ದವರು ಪರಂವಾ ಸ್ಟುಡಿಯೋಸ್‍ನ ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ. ಕಥೆಯೊಂದು ಶುರುವಾಗಿದೆ ಚಿತ್ರದ ಟ್ರೇಲರ್.. ಅಷ್ಟೇ ವಿಭಿನ್ನವಾಗಿ ಗಮನ ಸೆಳೆಯುತ್ತಿದೆ.