ಲೈಫ್ ಜೊತೆ ಒಂದ್ ಸೆಲ್ಫಿ... ಚಿತ್ರದ ಟ್ರೇಲರ್ ಹೊರಬೀಳುತ್ತಿದ್ದಂತೆ ಎಲ್ಲರಲ್ಲೂ ಒಂದು ಕಾತುರ, ನಿರೀಕ್ಷೆ ಇತ್ತು. ಏಕೆಂದರೆ, ಸಾರಥಿ ನಂತರ, ದಿನಕರ್ ತೂಗುದೀಪ್ ನಿರ್ದೇಶನ ಮಾಡಿರುವ ಸಿನಿಮಾ ಇದು. ಚಿತ್ರದ ಟ್ರೇಲರ್ ನೋಡಿದರೆ, ಈ ಬಾರಿ ದಿನಕರ್ ತೂಗುದೀಪ್ ನೇರವಾಗಿ ಹೃದಯಕ್ಕೇ ಕೈ ಹಾಕಿಬಿಟ್ಟಿದ್ದಾರೆ. ಒಂದು ಕುತೂಹಲವನ್ನು ಉಳಿಸಿಯೇ ಭಾವನೆಗಳನ್ನು ಅರಳಿಸಿದ್ದಾರೆ.
ಟ್ರೇಲರ್ ನೋಡಿದರೆ, ಅದು ಮೂವರು ಗೆಳೆಯರ ಟ್ರಾವೆಲ್ ಜರ್ನಿ ಎನ್ನಿಸುತ್ತೆ. ಪ್ರೇಮ್, ಪ್ರಜ್ವಲ್ ಮತ್ತು ಹರಿಪ್ರಿಯಾ ಪ್ರಮುಖ ಪಾತ್ರದಲ್ಲಿರುವ ಚಿತ್ರದಲ್ಲಿ ಇದ್ದಕ್ಕಿದ್ದಂತೆ ಒಂದು ಟ್ವಿಸ್ಟು. ದಾರಿ ಮಧ್ಯೆ ಸಿಗುವವರ ನಡುವಿನ ಬಾಂಧವ್ಯಕ್ಕೂ, ತಾಯಿಯ ಅನುಬಂಧಕ್ಕೂ ಹೋಲಿಕೆ ಕಾಣುತ್ತೆ. ಪ್ರತಿಯೊಬ್ಬರ ಜೀವನದಲ್ಲೂ ಎರಡನೇ ಲೈಫ್ ಶುರುವಾಗೋದೇ, ನಮಗಿರೋದು ಒಂದೇ ಜೀವನ ಅಂತಾ ಗೊತ್ತಾದ ಮೇಲೆ ಅನ್ನೋ ಡೈಲಾಗ್, ದಿನಕರ್ ಅವರ ತಾಕತ್ತು ಹೇಳುತ್ತಿವೆ.
ತಾಯಿಯ ಪಾತ್ರದಲ್ಲಿ ಸುಧಾರಾಣಿ, ಕಾಮಿಡಿಗೆ ಸಾಧುಕೋಕಿಲ ಇದ್ದಾರೆ. ಎಂದಿನಂತೆ ಸಂಗೀತ ಹರಿಕೃಷ್ಣ ಅವರದ್ದು.
ಹಾಡು, ಟ್ರೇಲರ್ ಮ್ಯಾಜಿಕ್ ಮಾಡೋಕೆ ಶುರುವಾಗಿದೆ. ಸಿನಿಮಾ.. ವೇಯ್ಟ್ ಮಾಡಿ.. ಅತಿ ಶೀಘ್ರದಲ್ಲೇ ಥಿಯೇಟರ್‍ಗೂ ಬರುತ್ತೆ.