ಕೋಟಿಗೊಬ್ಬ 3. ಇದು ಸುದೀಪ್ ಅಭಿನಯದ ಸಿನಿಮಾ. ಜೂನ್ 17ರಿಂದ ಯೂರೋಪ್‍ನಲ್ಲಿ ಶೂಟಿಂಗ್ ಶುರುವಾಗಲಿದೆ. ಕೋಟಿಗೊಬ್ಬ 2 ಸಕ್ಸಸ್ ನಂತರ, ಕೋಟಿಗೊಬ್ಬ 3ಗೆ ರೆಡಿಯಾಗುತ್ತಿರುವ ಸುದೀಪ್, ಚಿತ್ರದ ಒಂದು ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ.
ಕೋಟಿಗೊಬ್ಬ 3 ನಲ್ಲಿ ಶಿವ ಮತ್ತೊಮ್ಮೆ ಹುಟ್ಟಬಹುದು. ಹೌದು, ಕೋಟಿಗೊಬ್ಬ2ನಲ್ಲಿ ಸತ್ಯ ಮತ್ತು ಶಿವ ಎಂಬ ಎರಡು ಪಾತ್ರ ನಿರ್ವಹಿಸಿದ್ದರು ಸುದೀಪ್. ಆದರೆ, ಅದು ಡಬಲ್ ಆ್ಯಕ್ಟಿಂಗ್ ಅಲ್ಲ. ಕೊನೆಯಲ್ಲಿ ಶಿವ ಸತ್ತು, ಸತ್ಯ ಒಬ್ಬನೇ ಉಳಿಯುತ್ತಾನೆ. ಹಾಗಾದರೆ ಕೋಟಿಗೊಬ್ಬ 3ನಲ್ಲಿ ಶಿವ ಮತ್ತೆ ಹುಟ್ಟಿಬರುತ್ತಾನಾ..?
ಬೆಲ್‍ಗ್ರೇಡ್‍ಗೆ ಹೊರಡುತ್ತಿದ್ದೇವೆ ಎಂದು ಟ್ವೀಟ್ ಮಾಡಿರುವ ಸುದೀಪ್, ಇದು ಸತ್ಯ, ಮತ್ತೊಮ್ಮೆ ಶಿವನನ್ನು ಸೃಷ್ಟಿಸುವ ಸಮಯ ಎನ್ನುವ ಮೂಲಕ ಗುಟ್ಟು ಹೇಳಿದ್ದಾರೆ.
ಏನೇ ಇದ್ರೂ, ಸಿನಿಮಾ ತೆರೆಗೆ ಬರುವವರೆಗೆ ಅದು ಗುಟ್ಟಾಗಿಯೇ ಇರುತ್ತೆ. ಸಿನಿಮಾ ಬಿಡುಗಡೆಯಾಗುವವರೆಗೆ ವೇಯ್ಟ್ ಮಾಡಿ.