ಟ್ವಿಟರ್‍ನಲ್ಲಿ ಆಕ್ಟಿವ್ ಆಗಿರುವ ನಟಿಯರಲ್ಲಿ ಹರಿಪ್ರಿಯಾ ಕೂಡಾ ಒಬ್ಬರು. ಹಾಗೇ ಟ್ವಿಟರ್ ನೋಡುತ್ತಿದ್ದಾಗ, ಗರ್ಭಿಣಿಯೊಬ್ಬರಿಗೆ ತುರ್ತಾಗಿ ರಕ್ತ ಬೇಕಾಗಿದೆ ಎಂಬ ಟ್ವೀಟ್ ಕಣ್ಣಿಗೆ ಬಿತ್ತು. ತಕ್ಷಣ ಆಸ್ಪತ್ರೆಗೆ ಹೋಗಿಬಿಟ್ಟರು ಹರಿಪ್ರಿಯಾ. ಆ ಗರ್ಭಿಣಿಗೆ ರಕ್ತದಾನ ಮಾಡಿದ ಹರಿಪ್ರಿಯಾ, ಹೆರಿಗೆಯವರೆಗೂ ಇದ್ದು ಬಂದಿದ್ದಾರೆ. ಆ ಮಹಿಳೆ, ಅವಳಿ ಮಕ್ಕಳಿಗೆ ಜನ್ಮ ಕೊಟ್ಟಿದ್ದಾರೆ. ಹರಿಪ್ರಿಯಾ ಖುಷಿಗೆ ಇನ್ನೇನು ಬೇಕು.
ನಾನು ರಕ್ತದಾನ ಮಾಡಿದ್ದು ಇದೇ ಮೊದಲು. ಹೀಗಾಗಿ ರಕ್ತದಾನ ಮಾಡುವವರೆಗೂ ಸ್ವಲ್ಪ ಭಯವಿತ್ತು. ಆಮೇಲೆ ಆ ತಾಯಿಯನ್ನು ನೋಡಿದ ಮೇಲೆ ಅದೇನೋ ತೃಪ್ತಿ. ದಯವಿಟ್ಟು ಅಗತ್ಯವಿರುವವರಿಗೆ ರಕ್ತದಾನ ಮಾಡಿ ಎಂದು ಮನವಿ ಮಾಡಿದ್ದಾರೆ ಹರಿಪ್ರಿಯಾ. ಶಹಬ್ಬಾಸ್ ಎನ್ನಲೇಬೇಕಲ್ವಾ..