ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹೊಸ ಸಿನಿಮಾಗೆ ಮುಹೂರ್ತ ಫಿಕ್ಸ್ ಆಗಿದೆ. ಜೂನ್ 16ಕ್ಕೆ ದರ್ಶನ್ ಅಭಿನಯದ ಒಡೆಯರ್ ಸಿನಿಮಾ ಸೆಟ್ಟೇರಲಿದೆ. ಏಕೆಂದರೆ, ಅಂದು ನಿರ್ಮಾಪಕ ಸಂದೇಶ್ ನಾಗರಾಜ್ ಜನ್ಮದಿನ. ಅಂಬರೀಷ್ ಪುತ್ರ ಅಭಿಷೇಕ್ ಅಭಿನಯದ ಅಮರ್ ಚಿತ್ರದಲ್ಲಿ ಬ್ಯುಸಿಯಿರುವ ಸಂದೇಶ್ ನಾಗರಾಜ್, ದರ್ಶನ್ ಅಭಿನಯದ ಒಡೆಯರ್ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ.
ಅತ್ತ ಕುರುಕ್ಷೇತ್ರದ ಡಬ್ಬಿಂಗ್ ಮುಗಿಸಿ, ಯಜಮಾನ ಚಿತ್ರದಲ್ಲಿ ಬ್ಯುಸಿಯಾಗಿರುವ ದರ್ಶನ್, ಅದು ಮುಗಿದ ನಂತರ ಒಡಯರ್ ತಂಡ ಸೇರಿಕೊಳ್ಳಲಿದ್ದಾರೆ.
ಪೊರ್ಕಿ ಮತ್ತು ಬುಲ್‍ಬುಲ್ ಚಿತ್ರಗಳನ್ನು ನಿರ್ದೇಶಿಸಿದ್ದ ಎಂ.ಡಿ.ಶ್ರೀಧರ್, ಒಡೆಯರ್‍ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.