` ಜ್ಯೂ. ಕ್ರೇಜಿಸ್ಟಾರ್ ಕೈಲಿ ಲಾಂಗು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
chillum's first look is ut
Chillum First Look

ರವಿಚಂದ್ರನ್ ಎಂದರೆ ನೆನಪಾಗೋದು ಗುಲಾಬಿ, ಪ್ರೀತಿ, ನಗು, ರೊಮ್ಯಾನ್ಸ್, ಸೌಂದರ್ಯ, ಶೃಂಗಾರ.. ಇತ್ಯಾದಿ ಇತ್ಯಾದಿ.. ಆ್ಯಕ್ಷನ್ ಸಿನಿಮಾ ಮಾಡಿದ್ದಾರಾದರೂ, ಹಿಟ್ ಆಗಿದ್ದು ಕಡಿಮೆ. ಆದರೆ, ರವಿಚಂದ್ರನ್ ಅವರ ಪುತ್ರ ಮನೋರಂಜನ್, ತಮ್ಮ 3ನೇ ಚಿತ್ರದಲ್ಲೇ ಲಾಂಗು ಹಿಡಿದುಬಿಟ್ಟಿದ್ದಾರೆ. ಚಿಲಂ ಚಿತ್ರದಲ್ಲಿ ಮನೋರಂಜನ್ ಗಡ್ಡ ಬಿಟ್ಟು, ಲಾಂಗ್ ಹಿಡಿದು ರಗಡ್ ಲುಕ್‍ನಲ್ಲಿ ಪ್ರತ್ಯಕ್ಷವಾಗಿದ್ದಾರೆ.

ಚಂದ್ರಕಲಾ ನಿರ್ದೇಶನದ ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್, ಸರಿತಾ, ನಾನಾ ಪಾಟೇಕರ್ ಪ್ರಮುಖ ಪಾತ್ರದಲ್ಲಿದ್ದಾರೆ. ಪ್ರಿಯಾಂಕಾ ತಿಮ್ಮೇಶ್ ನಾಯಕಿ. 

ಬಿರುಸಾಗಿ ಸಾಗುತ್ತಿದ್ದ ಚಿತ್ರೀಕರಣಕ್ಕೆ ಎಡಬಿಡದೆ ಸುರಿಯುತ್ತಿರುವ ಮಳೆ ಬ್ರೇಕ್ ಹಾಕಿದೆ. ಮಳೆ ನಿಂತ ನಂತರ ಮತ್ತೊಮ್ಮೆ ಶೂಟಿಂಗ್ ಶುರುವಾಗಲಿದೆ ಎಂದು ತಿಳಿಸಿದೆ ಚಿತ್ರತಂಡ.

Londonalli Lambodara Movie Gallery

Rightbanner02_butterfly_inside

Panchatantra Movie Gallery