` ದ್ರೋಣ.. ಆಗ ಜಗ್ಗೇಶ್.. ಈಗ ಶಿವರಾಜ್‍ಕುಮಾರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivarajkimar's next film is drona
Drona Movie Image

ದ್ರೋಣ ಎಂದರೆ ಗುರು. ದ್ರೋಣ ಎಂದರೆ ಶಸ್ತ್ರವಿದ್ಯಾಪಾರಂಗತ. ದ್ರೋಣ ಎಂದರೆ ಮಹಾಭಾರತ. ದ್ರೋಣ ಎಂದರೆ, ಕ್ರೀಡಾಪಟುಗಳ ಕೋಚ್‍ಗಳಿಗೆ ಕೊಡುವ ಮಹೋನ್ನತ ಪ್ರಶಸ್ತಿ. ದ್ರೋಣ ಎಂದರೆ, ಕೆಲವು ವರ್ಷಗಳ ಹಿಂದೆ ಜಗ್ಗೇಶ್. ದ್ರೋಣ ಎಂದರೆ, ಈಗ ಶಿವರಾಜ್‍ಕುಮಾರ್. ಹೌದು, ದ್ರೋಣ ಅನ್ನೋ ಹೆಸರಿನ ಸಿನಿಮಾ ಸೆಟ್ಟೇರುತ್ತಿದೆ. ಜೂನ್ 22ರಂದು ಮುಹೂರ್ತಕ್ಕೆ ಸಿದ್ಧವಾಗಿದೆ ದ್ರೋಣ ಸಿನಿಮಾ.

ಈ ಚಿತ್ರದ ನಿರ್ದೇಶಕ ಪ್ರಮೋದ್ ಚಕ್ರವರ್ತಿ. ಈ ಮೊದಲು ಹರಹರ ಮಹಾದೇವ ಎಂದು ಟೈಟಲ್ ಇಡಲಾಗಿತ್ತು. ಈಗ ಟೈಟಲ್ ಬದಲಾಗಿದೆ. ದ್ರೋಣ ಎಂಬ ಟೈಟಲ್ ಫೈನಲ್ ಆಗಿದೆ. ಹನುಮಾನ್ ಚಿತ್ರವಿರುವ ಧ್ವಜ ಹಿಡಿದಿರುವ ಶಿವಣ್ಣನ ಔಟ್‍ಲುಕ್ ಹೊರಬಿದ್ದಿದೆ.

ಚಿತ್ರಕ್ಕೆ ಮಲಯಾಳಿ ಚೆಲುವೆ ಇನಿಯಾ ನಾಯಕಿ. ಮೋಹನ್‍ಲಾಲ್ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದ ಇನಿಯಾ, ದ್ರೋಣ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ ಮೊದಲಾದವರು ನಟಿಸುತ್ತಿರುವ ಚಿತ್ರ ದ್ರೋಣ.

ಅಂದಹಾಗೆ ದ್ರೋಣ, ಜಗ್ಗೇಶ್ ನಿರ್ಮಾಣದ ಮೊದಲ ಚಿತ್ರ. 1998ರಲ್ಲಿ ತೆರೆಗೆ ಬಂದಿದ್ದ ಸಿನಿಮಾ, ಹಿಟ್ ಆಗಿತ್ತು. ಈಗ ಸರಿಯಾಗಿ 20 ವರ್ಷಗಳ ನಂತರ ದ್ರೋಣ ಎಂಬ ಹೆಸರಿನ ಚಿತ್ರ ಸೆಟ್ಟೇರುತ್ತಿದೆ. ಈ ಬಾರಿ ಶಿವರಾಜ್‍ಕುಮಾರ್.

Padarasa Movie Gallery

Kumari 21 Movie Gallery