` ಯಶ್ ಮುಂದಿನ ಸಿನಿಮಾ ಫಿಕ್ಸ್..! - chitraloka.com | Kannada Movie News, Reviews | Image

User Rating: 4 / 5

Star activeStar activeStar activeStar activeStar inactive
 
yash next film with rambo 2 director
Yash Image

ರಾಕಿಂಗ್ ಸ್ಟಾರ್ ಯಶ್‍ರ ಹೊಸ ಸಿನಿಮಾ ಯಾವುದು..? ಕೆಜಿಎಫ್ ಮುಗಿದ ಮೇಲೆ ಯಾವ ಸಿನಿಮಾ ಮಾಡ್ತಾರೆ..? ಕಥೆ ಏನು..? ಡೈರೆಕ್ಟರ್ ಯಾರು..? ಹೀಗೆ ಹಲವಾರು ಪ್ರಶ್ನೆಗಳು ಕಾಡುತ್ತಲೇ ಇವೆ. ಈಗ ಆ ಪ್ರಶ್ನೆಗಳಿಗೆಲ್ಲ ಉತ್ತರ ಸಿಕ್ಕಿದೆ. ಯಶ್ ಅವರ ಹೊಸ ಸಿನಿಮಾದ ಡೈರೆಕ್ಟರ್ ಅನಿಲ್ ಕುಮಾರ್.

ರ್ಯಾಂಬೋ2 ಮೂಲಕ ಚುಟುಚುಟು ಮ್ಯಾಜಿಕ್ ಸೃಷ್ಟಿಸಿದ ಅನಿಲ್, ಯಶ್ ಅವರಿಗೆ ಈಗಾಗಲೇ ಕಥೆ ಹೇಳಿದ್ದಾರಂತೆ. ಯಶ್ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ. ಅನಿಲ್ ಕುಮಾರ್, ಯಶ್‍ಗೆ ಹೊಸಬರೇನಲ್ಲ. ಯಶ್ ಟೀಂನಲ್ಲೇ ಇದ್ದ ಸದಸ್ಯ. ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಅನಿಲ್, ಈಗ ಯಶ್ ಅವರಿಗೆ ಆ್ಯಕ್ಷನ್ ಕಟ್ ಹೇಳೋಕೆ ಸಿದ್ಧರಾಗುತ್ತಿದ್ದಾರೆ.

Padarasa Movie Gallery

Kumari 21 Movie Gallery