ಚಿರಂಜೀವಿ ಸರ್ಜಾ ಅಭಿಯನದ ಅಮ್ಮ ಐ ಲವ್ ಯೂ ಇದೇ ವಾರ ತೆರೆ ಕಾಣುತ್ತಿದೆ. ಈಗಾಗಲೇ ಗೊತ್ತಿರುವಂತೆ ಚಿತ್ರದಲ್ಲಿ ಚಿರು ಕೋಟ್ಯಧಿಪತಿ ಮತ್ತು ಭಿಕ್ಷುಕನಾಗಿ ಕಾಣಿಸಿಕೊಂಡಿದ್ದಾರೆ. ಕಥೆ ಕೇಳಿದಾಗ ಮತ್ತು ಮೂಲ ಚಿತ್ರವನ್ನು ನೋಡಿದಾಗ, ನಾನು ಭಿಕ್ಷುಕನ ಪಾತ್ರ ಮಾಡೋದಾ..? ಎನ್ನಿಸಿ ಮುಜುಗರಕ್ಕೊಳಗಾಗಿದ್ದರಂತೆ ಚಿರಂಜೀವಿ.
ಯೋಗಿ ಮತ್ತು ಚೈತನ್ಯ ಎಲ್ಲವನ್ನೂ ವಿವರಿಸಿದ ಮೇಲೆ ಕೂಡಾ ಸುಮಾರು 3 ತಿಂಗಳು ಪ್ರಾಜೆಕ್ಟ್‍ಗೆ ಓಕೆ ಎಂದಿರಲಿಲ್ಲ. 3 ತಿಂಗಳಾದ ಮೇಲೆ ಇಬ್ಬರೂ ಒಮ್ಮೆ ಬಂದು ಶಟಪ್ & ಡೂ ಇಟ್ ಅಂದ್ರು. ಅವರಿಗೇ ಅಷ್ಟು ಕಾನ್ಫಿಡೆನ್ಸ್ ಇರುವಾಗ, ನಾನು ಆ ಪಾತ್ರ ಮಾಡಬಲ್ಲೆ ಎನ್ನಿಸಿತು. ಅಮ್ಮ ಐ ಲವ್ ಯೂ ಚಿತ್ರವನ್ನು ಒಪ್ಪಿಕೊಂಡೆ. ಇದು ಚಿರಂಜೀವಿ ಸರ್ಜಾ ಪ್ರಾಜೆಕ್ಟ್ ಒಪ್ಪಿಕೊಂಡ ಕುರಿತಂತೆ ಹೇಳಿರುವ ಮಾತು.
ಯೋಗಿ ಮತ್ತು ಚೈತನ್ಯ ಜೊತೆ ಚಿರು ಅವರದ್ದು ವೃತ್ತಿ ಬಾಂಧವ್ಯಕ್ಕಿಂತ ಮಿಗಿಲಾದ ಸ್ನೇಹವಿದೆ. ಹೀಗಾಗಿಯೇ ನಮ್ಮ ಜೋಡಿ ರಿಪೀಟ್ ಆಗುತ್ತಿದೆ ಎಂದು ಹೇಳಿಕೊಳ್ತಾರೆ ಚಿರು. ಎಂಗೇಜ್‍ಮೆಂಟ್ ಆದ ಮೇಲೆ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾದ ಬಗ್ಗೆ ಚಿರು ಅವರಿಗೂ ನಿರೀಕ್ಷೆ ಇದೆ.