ಸುದೀಪ್, ಬಾಲಿವುಡ್ನಲ್ಲಿ ನಟಿಸೋದು ಹೊಸದೇನಲ್ಲ. ಆದರೆ,ಸುದೀಪ್ ಚಿತ್ರದಲ್ಲಿ ಬಾಲಿವುಡ್ ತಾರೆಗಳು ನಟಿಸೋದು ಈಗ ಟ್ರೆಂಡ್. ಸುದೀಪ್ ಅವರ ಪೈಲ್ವಾನ್ ಚಿತ್ರದಲ್ಲಿ ಸುನಿಲ್ ಶೆಟ್ಟಿ ಮತ್ತು ಕಬೀರ್ ದುಹಾನ್ ನಟಿಸುತ್ತಿದ್ದಾರೆ. ಈಗ ಕೋಟಿಗೊಬ್ಬ3 ಚಿತ್ರಕ್ಕೂ ಬಾಲಿವುಡ್ ಸ್ಟಾರ್ಸ್ ಬರುತ್ತಿದ್ದಾರೆ.
ಕೋಟಿಗೊಬ್ಬ3 ಚಿತ್ರದಲ್ಲಿ ಬಾಲಿವುಡ್ನ ಅಫ್ತಾಬ್ ಶಿವದಾಸನಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಿಲನ್ ಆಗಿರೋದು ಡಾನ್ 2 ಖ್ಯಾತಿಯ ನವಾಬ್ ಶಾ. ಅಫ್ತಾಬ್ಗೆ ಸ್ಯಾಂಡಲ್ವುಡ್ನಲ್ಲಿ ಇದು ಮೊದಲ ಸಿನಿಮಾ.