ಕಾಮಿಡಿ ಕಿಂಗ್ ಆಗಿರುವ ಶರಣ್, ತುಪ್ಪದ ಹುಡುಗಿ ರಾಗಿಣಿ ಜೊತೆ ಅಮೆರಿಕಕ್ಕೆ ಹಾರಿಬಿಟ್ಟಿದ್ದಾರೆ. ಜೋಡಿಯಾಗಿ. ಚಿತ್ರವೊಂದರ ಶೂಟಿಂಗ್‍ಗೆ ಜೊತೆ ಜೊತೆಯಾಗಿ ತೆರಳಿದ್ದಾರೆ ರಾಗಿಣಿ ಮತ್ತು ಶರಣ್.
ಶರಣ್ ಮತ್ತು ರಾಗಿಣಿ ಹೊಸ ಚಿತ್ರವೊಂದರಲ್ಲಿ ಜೊತೆಯಾಗಿ ನಟಿಸುತ್ತಿದ್ದು, ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಮಲಯಾಳಂನ ಟೂ ಕಂಟ್ರಿಸ್ ಚಿತ್ರದ ರೀಮೇಕ್ ಆಗಿರುವ ಚಿತ್ರ ಅದು. ಬಹುಭಾಗದ ಚಿತ್ರೀಕರಣ ಅಮೆರಿಕದಲ್ಲೇ ನಡೆಯಲಿದೆ.
ಈ ಹಿಂದೆ ವಿಕ್ಟರಿ ಚಿತ್ರದಲ್ಲಿ ಅಕ್ಕ ನಿನ್ ಮಗ್ಳು ನಂಗೆ ಚಿಕ್ಕೋಳಗಲ್ವಾ ಎಂಬ ಹಾಡಿನಲ್ಲಿ ಶರಣ್ ಜೊತೆ ಹೆಜ್ಜೆ ಹಾಕಿದ್ದ ರಾಗಿಣಿ, ಈಗ ಶರಣ್‍ಗೇ ನಾಯಕಿಯಾಗಿರೋದು ಇಂಟ್ರೆಸ್ಟಿಂಗ್. ಈ ಚಿತ್ರದ ಚಿತ್ರೀಕರಣ ಅಮೆರಿಕದಲ್ಲೇ ಸುಮಾರು 1 ತಿಂಗಳು ನಡೆಯಲಿದೆ.