` ಕಿವುಡ ಹೀರೋನ ಕಥೆ ನೋಡೋಕೆ ರೆಡಿಯಾಗಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
story of deaf hero
KattuKathe Movie Image

ಇತ್ತೀಚೆಗೆ ತೆಲುಗಿನಲ್ಲಿ ರಂಗಸ್ಥಳಂ ಅನ್ನೋ ಸಿನಿಮಾ ಬಂದಿತ್ತು. ಚಿತ್ರದ ನಾಯಕ ರಾಮ್‍ಚರಣ್ ಕಿವುಡನಾಗಿ ನಟಿಸಿದ್ದರು. ಚಿತ್ರ ಬಾಕ್ಸಾಫೀಸ್‍ನಲ್ಲೂ ಸಕ್ಸಸ್ ಆಗಿತ್ತು. ಈಗ ಕನ್ನಡದಲ್ಲೂ ಕಿವುಡನ ಪಾತ್ರವೇ ಹೀರೋ ಆಗಿರುವ ವಿಭಿನ್ನ ಸಿನಿಮಾ ಬರುತ್ತಿದೆ. ಅದು ಕಟ್ಟುಕಥೆ.

ಕಟ್ಟುಕಥೆ ಚಿತ್ರದ ನಾಯಕ ಸೂರ್ಯ, ಚಿತ್ರದಲ್ಲಿ ಶೇ.80ರಷ್ಟು ಕಿವುಡನಾಗಿ ನಟಿಸಿದ್ದಾರೆ. ಫ್ಯಾಕ್ಟರಿಯೊಂದರ ಸ್ಫೋಟದಲ್ಲಿ ಕಿವಿ ಕಳೆದುಕೊಂಡ ಹೀರೋ, ಆಪರೇಷ್‍ನೆ ಮುನ್ನ ಒಂದು ಜಾಗಕ್ಕೆ ಹೋಗುತ್ತಾನೆ. ಅಲ್ಲಿ ಹೀರೋಯಿನ್ನೂ ಇರ್ತಾಳೆ. ಏನೂ ಕೇಳಿಸದಿದ್ದರೂ, ಎಲ್ಲವೂ ಗೊತ್ತಿರುವ ಹಾಗೆ ನಟಿಸುವ ಹೀರೋ, ಅಲ್ಲೊಂದು ಕೊಲೆ.. ಬುದ್ದಿವಂತ ಕೊಲೆಗಾರ.. ಚಾಣಾಕ್ಷ ಅಧಿಕಾರಿ.. ಹೀಗೆ ಇಡೀ ಕಥೆ ಉಸಿರಾಡುವುದಕ್ಕೂ ಆಸ್ಪದ ಕೊಡದೆ ಥ್ರಿಲ್ ಕೊಡುತ್ತೆ ಅನ್ನೋದು ನಟ ಸೂರ್ಯ ಭರವಸೆ.

ಚಿತ್ರದ ನಿರ್ದೇಶಕ ಪ್ರವೀಣ್ ರಾಜ್, ಶೂಟಿಂಗ್ ಸ್ಪಾಟ್‍ಗೆ ಎಷ್ಟರಮಟ್ಟಿಗೆ ಸಿದ್ಧರಾಗಿ ಬರೋವ್ರು ಅಂದ್ರೆ, ಒಂದು ಪಾತ್ರ ಎಲ್ಲಿ ನಿಲ್ಲಬೇಕು, ಎಷ್ಟು ಏರಿಳಿತದಲ್ಲಿ ಮಾತನಾಡಬೇಕು ಅನ್ನೋದನ್ನೂ ಫಿಕ್ಸ್ ಮಾಡಿರೋರು. ಅಷ್ಟರಮಟ್ಟಿಗೆ ಪ್ರೊಫೆಷನಲ್ ಎಂದು ನಿರ್ದೇಶಕರನ್ನು ಹೊಗಳುತ್ತಾರೆ ಸೂರ್ಯ.

ರತ್ನಜ ನಿರ್ದೇಶನದ ಪ್ರೀತಿಯಲ್ಲಿ ಸಹಜ ಚಿತ್ರದ ನಂತರ ಸೂರ್ಯ ಅಭಿನಯಿಸುತ್ತಿರುವ ಸಿನಿಮಾ ಇದು. ಮಹಾದೇವ್ ನಿರ್ಮಾಣದ ಚಿತ್ರಕ್ಕೆ ಸ್ವಾತಿ ಕೊಂಡೆ ನಾಯಕಿ. ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ.

Sri Bharaha Baahubali Pressmeet Gallery

Govinda Govinda Pressmeet Gallery