ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ದಾಸನಾಗಿದ್ದಾರೆ. ಒನ್ಸ್ ಎಗೇಯ್ನ್.. ಅಭಿಮಾನಿಗಳ ಎದುರು. ಇತ್ತೀಚೆಗೆ ದರ್ಶನ್ ಅವರ ಆಟೋ ಡ್ರೈವರ್ ಅಭಿಮಾನಿಗಳು ಸೀದಾ ಅವರ ಮನೆಗೇ ಹೋಗುತ್ತಿದ್ದಾರೆ. ಮನೆಯಲ್ಲಿದ್ದರೆ ಅಭಿಮಾನಿಗಳನ್ನು ಸದಾ ಭೇಟಿ ಮಾಡುವ ದರ್ಶನ್‍ಗೆ ಅಭಿಮಾನಿಗಳದ್ದು ಒಂದೇ ಡಿಮ್ಯಾಂಡ್. ಆಟೊಗ್ರಾಫ್ ಪ್ಲೀಸ್.. ಅದೂ ಆಟೋ ಮೇಲೆ.
ಇದು ದರ್ಶನ್ ಅಭಿಮಾನಿಗಳ ಕ್ರೇಜ್. ಇಷ್ಟು ದಿನ ಆಟೋಗಳ ಹಿಂದೆ, ದರ್ಶನ್ ಚಿತ್ರದ ಹೆಸರು, ಬಿರುದು, ಫೋಟೋ, ಚಿತ್ರ ಹಾಕಿಕೊಂಡು ಖುಷಿ ಪಡುತ್ತಿದ್ದ ಅಭಿಮಾನಿಗಳು, ಈಗ ದರ್ಶನ್ ಅವರಿಂದಲೇ ಆಟೋಗ್ರಾಫ್ ಹಾಕಿಸಿಕೊಳ್ಳುವ ಐಡಿಯಾ ಕಂಡುಕೊಂಡಿದ್ದಾರೆ.