ರ್ಯಾಂಬೋ2, ಶರಣ್ ಅಭಿನಯದ ಈ ಸಿನಿಮಾ, ನೋಡನೋಡುತ್ತಲೇ ದಾಖಲೆಗಳನ್ನು ಚಿಂದಿ ಉಡಾಯಿಸಿಬಿಟ್ಟಿದೆ. ಬಾಕ್ಸಾಫೀಸ್‍ನಲ್ಲಿ ಚುಟು ಚುಟು ಎನ್ನುತ್ತಾ ಮುನ್ನುಗ್ಗುತ್ತಿರುವ ಸಿನಿಮಾ, ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ.
ಶರಣ್, ಅಶಿಕಾ ರಂಗನಾಥ್, ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿರುವ ಸಿನಿಮಾ, ಕಚಗುಳಿಯಿಡುವ ಸಂಭಾಷಣೆ, ಕುಣಿಸುವಂತಾ ಹಾಡುಗಳಿಂದ ಪ್ರೇಕ್ಷಕರ ಮನಗೆದ್ದಿದೆ. ತರುಣ್ ಸುಧೀರ್, ಅಟ್ಲಾಂಟಾ ನಾಗೇಂದ್ರ, ಶರಣ್, ಚಿಕ್ಕಣ್ಣ, ಅರ್ಜುನ್ ಜನ್ಯಾ ಸೇರಿದಂತೆ ತಂತ್ರಜ್ಞರೇ ಈ ಚಿತ್ರದ ನಿರ್ಮಾಪಕರು.
ಕರ್ನಾಟಕದಲ್ಲಷ್ಟೇ ವಿದೇಶದಲ್ಲೂ ಭರ್ಜರಿ ಸದ್ದು ಮಾಡುತ್ತಿದೆ ರ್ಯಾಂಬೋ 2. ಚುಟು ಚುಟು ಅಂತೈತಿ ಹಾಡಂತೂ ಮ್ಯಾಜಿಕ್ ಸೃಷ್ಟಿಸಿದೆ.