ಕೇಂದ್ರ ಕ್ರೀಡಾ ಸಚಿವರಿಂದ ಫಿಟ್‍ನೆಸ್ ಚಾಲೆಂಜ್, ಮೋದಿ, ಕೊಹ್ಲಿ, ಬಾಲಿವುಡ್ ರೌಂಡ್ ಮುಗಿಸಿ ಈಗ ಸ್ಯಾಂಡಲ್‍ವುಡ್‍ನಲ್ಲಿ ಸದ್ದು ಮಾಡುತ್ತಿದೆ. ಕಿಚ್ಚ ಸುದೀಪ್‍ಗೆ ಕ್ರಿಕೆಟಿಗ ವಿನಯ್ ಕುಮಾರ್ ಫಿಟ್‍ನೆಸ್ ಚಾಲೆಂಜ್ ಹಾಕಿದ್ದರು. ಸುದೀಪ್, ಅದನ್ನು ತಮ್ಮ ಪತ್ನಿ, ಯಶ್ ಹಾಗೂ ಶಿವರಾಜ್‍ಕುಮಾರ್‍ಗೆ ದಾಟಿಸಿದ್ದರು. ಈಗ ಫಿಟ್‍ನೆಸ್ ಚಾಲೆಂಜ್ ಹಾಕಿರೋದು ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್.
ಪುನೀತ್ ಅವರಿಗೆ ಚಾಲೆಂಜ್ ಹಾಕಿರೋದು ಡಾ.ಅಶ್ವತ್ಥ್ ನಾರಾಯಣ ಹಾಗೂ ಹೇಮಂತ್ ಮುದ್ದಪ್ಪ ಎಂಬುವವರು. ಅದನ್ನು ಸ್ವೀಕರಿಸಿರುವ ಪುನೀತ್, ತಮ್ಮ ಪುಟ್ಟ ತಂಡದೊಂದಿಗೆ ಎಕ್ಸರ್‍ಸೈಜ್ ಮಾಡಿದ್ದಾರೆ. ಪ್ರತಿಯೊಬ್ಬರೂ ಫಿಟ್ ಆಗಿರಬೇಕು ಎಂದಿರುವ ಪುನೀತ್, ಚಾಲೆಂಜ್‍ನ್ನು ರಕ್ಷಿತ್ ಶೆಟ್ಟಿ, ಧ್ರುವ ಸರ್ಜಾ, ಶ್ರೀಮುರಳಿ ಹಾಗೂ ಡ್ಯಾನಿಶ್ ಸೇಟ್‍ಗೆ ರವಾನಿಸಿದ್ದಾರೆ.
ಇನ್ನು ಚಾಲೆಂಜ್ ಸ್ವೀಕರಿಸುರವ ರಕ್ಷಿತ್ ಶೆಟ್ಟಿ, ಧ್ರುವ ಸರ್ಜಾ, ಶ್ರೀಮುರಳಿ ಹಾಗೂ ಡ್ಯಾನಿಶ್ ಸೇಟ್, ಮತ್ಯಾರಿಗೆ ಚಾಲೆಂಜ್ ಹಾಕ್ತಾರೆ.. ನೋಡಬೇಕು.