ಚಿರಂಜೀವಿ ಸರ್ಜಾ ಅಂದ್ರೆ ಆ್ಯಕ್ಷನ್ ಮತ್ತು ರೊಮ್ಯಾನ್ಸ್. ಆದರೆ, ಈಗ ಚಿರಂಜೀವಿ ಸರ್ಜಾ ಆಟೋ ಡ್ರೈವರ್ ಆಗಿಬಿಟ್ಟಿದ್ದಾರೆ. ಮೈಸೂರಿನಲ್ಲಿ ಅಕ್ಷರಶಃ ಆಟೋ ಓಡಿಸಿದ್ದಾರೆ ಚಿರಂಜೀವಿ ಸರ್ಜಾ.
ಅಮ್ಮ ಐ ಲವ್ ಯೂ ಚಿತ್ರದ ಪ್ರಚಾರಕ್ಕೆ ಮೈಸೂರಿಗೆ ತೆರಳಿದ್ದ ಚಿರಂಜೀವಿ ಸರ್ಜಾ, ಅಲ್ಲಿನ ಸಿದ್ಧಾರ್ಥ ಹೋಟೆಲ್‍ಗೆ ಆಟೋದಲ್ಲಿ ಎಂಟ್ರಿ ಕೊಟ್ರು. ತಿಂಡಿ ತಿನ್ನೋಕೆ ಆಟೋದಲ್ಲಿ ಬಂದ ಚಿರಂಜೀವಿ ಸರ್ಜಾರನ್ನು ಕಂಡವರಿಗೆ ಸಣ್ಣದೊಂದು ಆಘಾತವಾಗಿದ್ದರೆ ಅಚ್ಚರಿಯೇನೂ ಇಲ್ಲ.
ಆದರೆ, ಇದು ಚಿತ್ರದ ಪ್ರಚಾರಕ್ಕಷ್ಟೇ ಅಲ್ಲ, ಮೈಸೂರಿಗೆ ಹೋದಾಗಲೆಲ್ಲ ಚಿರಂಜೀವಿ ಸರ್ಜಾ ಇಂಥಹ ಕೆಲಸ ಮಾಡ್ತಾ ಇರ್ತಾರಂತೆ. ಜಸ್ಟ್ ಥ್ರಿಲ್‍ಗಾಗಿ.