` ಮಂತ್ರಿಯಾದ ಗಿರಿಕನ್ಯೆ.. ಸಂಭ್ರಮಿಸಿದ ಚಿತ್ರರಂಗ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
minister jayamala is flooded with wishes
Jayamala Image

ಜಯಮಾಲಾ.. ಹಾಗೆಂದ ಕೂಡಲೇ ತಕ್ಷಣ ನೆನಪಾಗುವುದು ಗಿರಿಕನ್ಯೆ. ಥೈಥೈಥೈಥೈ ಬಂಗಾರಿ.. ಹಾಡು.. ಮೂಲತಃ ದಕ್ಷಿಣ ಕನ್ನಡದವರಾದ ಜಯಮಾಲಾ ಅವರ ಮನೆ ಭಾಷೆ ತುಳು. ಮೂಲ ಹೆಸರು ಜಯಂತಿ. ಚಿತ್ರರಂಗಕ್ಕೆ ಬಂದ ಮೇಲೆ ಜಯಮಾಲಾ ಆದರು. ಈಗ ಸಚಿವೆ ಜಯಮಾಲಾ.

ಕುಮಾರಸ್ವಾಮಿ ಸಂಪುಟದಲ್ಲಿ ಜಯಮಾಲಾ ಏಕೈಕ ಮಹಿಳಾ ಸಚಿವೆ. ವಿಧಾನಪರಿಷತ್ ಸದಸ್ಯೆಯಾಗಿದ್ದ ಜಯಮಾಲಾ ರಾಮಚಂದ್ರಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಿಗುವ ಸಾಧ್ಯತೆಗಳಿವೆ.

ಜಯಮಾಲಾ ಅವರ ಹುಟ್ಟೂರು ಪಣಂಬೂರು. ಮಂಗಳೂರಿಗೆ ಸಮೀಪದಲ್ಲೇ ಇದೆ. 9 ಮಂದಿಯ ತುಂಬು ಕುಟುಂಬದಲ್ಲಿ ಹುಟ್ಟಿದವರು ಜಯಮಾಲಾ. ಅಕ್ಕ ರತ್ನಮಾಲಾ ಆರ್ಕೆಸ್ಟ್ರಾ ಗಾಯಕಿ. ಕುಟುಂಬ ನಿರ್ವಹಣೆಗಾಗಿ ಅಕ್ಕನೊಂದಿಗೆ ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದ ಜಯಮಾಲಾ, 8ನೇ ಕ್ಲಾಸ್‍ನಲ್ಲಿದ್ದಾಗ ನಾಟಕಕ್ಕೆ ಬಣ್ಣ ಹಚ್ಚಿದ್ರು. ನಾಟಕದಲ್ಲಿ ನಟಿಸುತ್ತಿರುವಾಗಲೇ `ಕಾಸ್ ದಾಯೇ ಕಂಡನಿ' ಅನ್ನೋ ಸಿನಿಮಾಗೆ ನಾಯಕಿಯಾದ್ರು. ಅದು ತುಳು ಸಿನಿಮಾ. ಅದಾದ ಮೇಲೆ ಜಯಮಾಲಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ಭೂತಯ್ಯನ ಮಗ ಅಯ್ಯು ಚಿತ್ರದ ಮೂಲಕ. 

ಕನ್ನಡ ಚಿತ್ರರಂಗಕ್ಕೆ ಜಯಮಾಲಾರನ್ನು ಪರಿಚಯಿಸಿದ ಕೀರ್ತಿ ಸಿದ್ಧಲಿಂಗಯ್ಯನವರದ್ದು. ಜಯಮಾಲಾಗೆ ಅತಿದೊಡ್ಡ ಹೆಸರು ತಂದುಕೊಟ್ಟ ಸಿನಿಮಾ ಗಿರಿಕನ್ಯೆ. ಡಾ.ರಾಜ್ ಜೊತೆ ನಟಿಸಿದ್ದ ಆ ಚಿತ್ರದಿಂದಾಗಿಯೇ ಇಂದಿಗೂ ಕನ್ನಡಿಗರು ಜಯಮಾಲಾ ಅವರನ್ನ ಗಿರಿಕನ್ಯೆ ಎಂದೇ ಕರೆಯುತ್ತಾರೆ. ಡಾ.ರಾಜ್ ಜೊತೆ 7 ಚಿತ್ರಗಳಿಗೆ ನಾಯಕಿಯಾಗಿದ್ದ ಜಯಮಾಲಾ, ವಿಷ್ಣುವರ್ಧನ್, ಅಂಬರೀಷ್, ಶಂಕರ್‍ನಾಗ್, ಅನಂತ್‍ನಾಗ್ ಮೊದಲಾದ ದಿಗ್ಗಜರ ಜೊತೆ ನಟಿಸಿದ್ದಾರೆ. ನಿರ್ಮಾಪಕಿಯಾಗಿ ತಾಯಿಸಾಹೇಬ, ತುತ್ತೂರಿ ಚಿತ್ರಗಳನ್ನು ಮಾಡಿದ್ದಾರೆ. ರಾಷ್ಟ್ರೀಯ ಪುರಸ್ಕಾರವನ್ನೂ ಪಡೆದಿರುವ ಜಯಮಾಲ, ಡಾಕ್ಟರೇಟ್ ಪಡೆದಿರುವ ಪ್ರತಿಭೆ.

ಅದು ಗೌರವ ಡಾಕ್ಟರೇಟ್ ಅಲ್ಲ. ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಜಯಮಾಲಾ, ನಿರಾಶ್ರಿತ ಮಹಿಳೆಯರ ಬಗ್ಗೆ ಅಧ್ಯಯನ ಮಾಡಿ ಡಾಕ್ಟರೇಟ್ ಪದವಿ ಡಾ.ಜಯಮಾಲಾ ಅದವರು. 

ಜಯಮಾಲಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೊತ್ತ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದವರು. ಜಯಮಾಲಾ ಅವರಿಗೆ ಈಗ ಅಭಿನಂದನೆಗಳ ಸುರಿಮಳೆಯಾಗುತ್ತಿದೆ. 

ಕಲಾವಿದೆಯಾಗಿ, ನಿರ್ಮಾಪಕಿಯಾಗಿ, ಫಿಲಂ ಚೇಂಬರ್ ಅಧ್ಯಕ್ಷೆಯಾಗಿ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ನೀಡಿರುವ ಜಯಮಾಲಾ ಅವರಿಗೆ ಅಭಿನಂದನೆ. ಅವರಿಂದ ಕನ್ನಡ ಚಿತ್ರರಂಗಕ್ಕೆ ಇನ್ನಷ್ಟು ಸೇವೆ ದೊರೆಯಲಿ ಎನ್ನುವುದು ನಮ್ಮ ಆಶಯ.

ಸಾ.ರಾ.ಗೋವಿಂದು, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ

ಅವರು ನಮ್ಮ ಕುಟುಂಬದ ಆಪ್ತ ಒಡನಾಡಿ. ನಟಿಯಾಗಿ ಸಾಧನೆ ಮಾಡಿರುವ ಅವರು ಖಂಡಿತಾ ಒಳ್ಳೆಯ ಕೆಲಸ ಮಾಡುತ್ತಾರೆ ಎನ್ನುವ ನಂಬಿಕೆ ನನಗಿದೆ.ಶಿವರಾಜ್ ಕುಮಾರ್, ನಟ

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery