` ಕರಿಯನ ಚೆಲುವೆ ಮತ್ತೊಮ್ಮೆ ಕನ್ನಡಕ್ಕೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kariya heroine in a guest role for kannada movie
Abhinayashri Image

ಅಭಿನಯಶ್ರೀ. ದರ್ಶನ್ ಅಭಿನಯದ ಕರಿಯ ಚಿತ್ರದ ನಾಯಕಿ. ತೆಲುಗಿನ ಆರ್ಯ ಚಿತ್ರದಲ್ಲಿ ಅ ಅಂಟೆ ಅಮಲಾಪುರ ಹಾಡಿನ ಮೂಲಕ ಖ್ಯಾತರಾಗಿದ್ದ ನಟಿ. ಈಗ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಯೋಗಿ ಲವ್ಸ್ ಸುಪ್ರಿಯಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ ಅಭಿನಯಶ್ರೀ.

ಚಿತ್ರದ ಹೀರೋಯಿನ್ ಶಿಕ್ಷಣ ಪಡೆಯುವ ಕಾಲೇಜ್‍ನಲ್ಲಿ ಅತಿಥಿಯಾಗಿ ಬರುವ ಪಾತ್ರ ಅದು. ಚಿತ್ರದಲ್ಲಿ ಅಭಿನಯಶ್ರೀ, ನಾಯಕಿಯಾಗಿಯೇ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲ, ಒಂದು ಹಾಡಿಗೆ ಅಭಿನಯಶ್ರೀ ಕೊರಿಯಾಗ್ರಫಿ ಕೂಡಾ ಮಾಡಲಿದ್ದಾರಂತೆ. ಎಷ್ಟೆಂದರೂ ಅಭಿನಯಶ್ರೀ ಮೂಲತಃ ಕೊರಿಯಾಗ್ರಾಫರ್. 

ಯೋಗಿ ಎಂಬ ನಿರ್ದೇಶಕರು, ಸ್ವತಃ ನಟಿಸಿ ನಿರ್ದೇಶಿಸುತ್ತಿರುವ ಸಿನಿಮಾ ಯೋಗಿ ಲವ್ಸ್ ಸುಪ್ರಿಯಾ. ಅಂದಹಾಗೆ ಚಿತ್ರಕ್ಕೆ ಪ್ರಿಯಾ ವಾರಿಯರ್‍ನ್ನು ನಾಯಕಿ ಪಾತ್ರಕ್ಕೆ ಸಂಪರ್ಕಿಸಲಾಗಿತ್ತು. ಅವರ ಡೇಟ್ಸ್ ಹೊಂದಾಣಿಕೆ ಆಗದ ಹಿನ್ನೆಲೆಯಲ್ಲಿ ಬೇರೆಯವರಿಗಾಗಿ ಹುಡುಕಾಟ ನಡೆದಿದೆಯಂತೆ.

Adi Lakshmi Purana Movie Gallery

Rightbanner02_butterfly_inside

Yaana Movie Gallery