ಪೈಲ್ವಾನ್.. ಸುದೀಪ್ ಬಾಕ್ಸರ್ ಆಗಿ ನಟಿಸುತ್ತಿರುವ ಚಿತ್ರ, ದಿನೇ ದಿನೇ ಕುತೂಹಲ ಹುಟ್ಟಿಸುತ್ತಿದೆ. ಚಿತ್ರದಲ್ಲಿ ಸುನಿಲ್ ಶೆಟ್ಟಿ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕೃಷ್ಣ ನಿರ್ದೇಶನದ ಸಿನಿಮಾದಲ್ಲಿ ಸುದೀಪ್ ಅವರ ಪಾತ್ರ, ಚಿತ್ರದ ಕಥೆಯ ಕುರಿತು ನಿರೀಕ್ಷೆ ಹೆಚ್ಚುತ್ತಿದೆ.
ಅದಕ್ಕೆ ಕಾರಣವಾಗಿರೋದು ಚಿತ್ರತಂಡದಿಂದ ಹೊರಬಿದ್ದ ಫೋಟೋಗಳು. ಮೊದಲು ಬಿಡುಗಡೆಯಾಗಿದ್ದ ಪೋಟೋದಲ್ಲಿ ಆಟೋರಾಜ ಶಂಕರ್‍ನಾಗ್ ಅಭಿಮಾನಿಗಳ ಬಳಗ ಅನ್ನೋ ಫೋಟೋ ಕಾಣಿಸಿಕೊಂಡಿತ್ತು. ಹಾಗಿದ್ದರೆ ಸುದೀಪ್ ಶಂಕ್ರಣ್ಣನ ಫ್ಯಾನ್ ಆಗಿರ್ತಾರೆ ಅನ್ನೋ ನಿರೀಕ್ಷೆ ಹುಟ್ಟಿಸಿತ್ತು. ಈಗ ಇನ್ನೊಂದು ಫೋಟೋ ಹೊರಬಿದ್ದಿದೆ.
ಈ ಫೋಟೋದಲ್ಲಿ ಡಾ.ರಾಜ್, ವಿಷ್ಣು, ಅಂಬಿ, ರವಿಚಂದ್ರನ್, ಶಂಕರ್‍ನಾಗ್, ವಜ್ರಮುನಿ ಸೇರಿದಂತೆ ಕನ್ನಡ ಚಿತ್ರರಂಗದ ದಿಗ್ಗಜರ ಪೋಸ್ಟರ್‍ಗಳಿವೆ. ಆ ಪೋಸ್ಟರ್‍ಗಳ ಮುಂದೆ ನಿಂತು ಚಿತ್ರತಂಡದೊಂದಿಗೆ ಫೋಸ್ ಕೊಟ್ಟಿರೋದು ಕಿಚ್ಚ ಸುದೀಪ್.
ಹಾಗಾದರೆ, ಚಿತ್ರದ ಕಥೆ, ಸುದೀಪ್ ಪಾತ್ರ ಹೇಗಿರಬಹುದು. ನಿಮ್ಮ ಊಹೆಗೆ ಬಿಟ್ಟಿದ್ದು.