ತಮನ್ನಾ ಭಾಟಿಯಾ. ತಮಿಳು, ತೆಲುಗು ಚಿತ್ರರಂಗದ ಮಿಲ್ಕಿಬ್ಯೂಟಿ. ಹಿಂದಿಯಲ್ಲೂ ಹೆಜ್ಜೆಯಿಟ್ಟಿರುವ ತಮನ್ನಾ, ಕನ್ನಡದ ಜಾಗ್ವಾರ್ ಚಿತ್ರದ ಐಟಂ ಸಾಂಗೊಂದರಲ್ಲಿ ಹೆಜ್ಜೆ ಹಾಕಿದ್ದರು. ಅದಾದ ನಂತರ ಪುನೀತ್ ರಾಜ್‍ಕುಮಾರ್ ಜೊತೆ ಜಾಹೀರಾತೊಂದರಲ್ಲಿ ನಟಿಸಿದ್ದರು. ಪುನೀತ್ ಜೊತೆ ಸಿನಿಮಾ ಮಾಡುವ ಕನಸಿದೆ ಎಂದು ಹೇಳಿಕೊಂಡಿದ್ದ ತಮನ್ನಾ, ಇದೇ ವರ್ಷದ ಕೊನೆಯ ಹೊತ್ತಿಗೆ ಕನ್ನಡ ಚಿತ್ರದಲ್ಲಿ ಪ್ರತ್ಯಕ್ಷವಾಗುವ ಸುಳಿವು ಕೊಟ್ಟಿದ್ದಾರೆ.
ಮೈಸೂರಿನಲ್ಲಿ ಬಟರ್‍ಫ್ಲೈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಅದೇ ಲೊಕೇಷನ್‍ನಲ್ಲಿ ತಮಿಳು ಕ್ವೀನ್ ವರ್ಷನ್‍ನ ಶೂಟಿಂಗ್ ಕೂಡಾ ನಡೆಯುತ್ತಿದೆ. ಬಟರ್‍ಫ್ಲೈ ಚಿತ್ರತಂಡ, ಪಾರುಲ್ ಯಾದವ್ ಅವರ ಹುಟ್ಟುಹಬ್ಬದ ಆಚರಣೆ ವೇಳೆ ತಮನ್ನಾ ಕೂಡಾ ಅಲ್ಲಿಯೇ ಇದ್ದರು. ಈ ವೇಳೆ ತಮ್ಮ ಕನ್ನಡ ಚಿತ್ರದ ಪ್ರವೇಶವನ್ನು ಘೋಷಿಸಿಕೊಂಡರು.
ಕನ್ನಡದಿಂದ ಮತ್ತೊಂದು ಆಫರ್ ಬಂದಿದೆ. ಸದ್ಯಕ್ಕೆ ಅದಿನ್ನೂ ಮಾತುಕತೆ ಹಂತದಲ್ಲಿದೆ. ಈಗಲೇ ಹೆಚ್ಚಿನ ವಿವರ ಕೊಡೋದು ಸಾಧ್ಯವಿಲ್ಲ. ಆದರೆ, ಆ ಸಿನಿಮಾ ಇದೇ ವರ್ಷ ಸೆಟ್ಟೇರಲಿದೆ ಅನ್ನೋದು ಮಾತ್ರ ಗ್ಯಾರಂಟಿ ಎಂದಿದ್ದಾರೆ.