ಚಿತ್ರನಟಿ ಪಾರುಲ್ ಯಾದವ್, ಚಿಟ್ಟೆಯಾಗಿದ್ದಾರೆ. ಏಕೆಂದರೆ, ಅವರೀಗ ಬಟರ್‍ಫ್ಲೈ ಚಿತ್ರದ ನಾಯಕಿ ಕಂ ನಿರ್ಮಾಪಕಿ. ಈ ಚಿತ್ರದೊಂದಿಗೆ ಪಾರುಲ್ ಅವರಿಗೆ ವಿಶೇಷ ಬಾಂಧವ್ಯವೂ ಬೆಳೆದುಬಿಟ್ಟಿದೆ. ಕಳೆದ ವರ್ಷ ಪಾರುಲ್ ಹುಟ್ಟುಹಬ್ಬದಂದೇ ಚಿತ್ರದ ಮುಹೂರ್ತ ನೆರವೇರಿತ್ತು. ಈ ವರ್ಷ ಮತ್ತೊಮ್ಮೆ ಅದೇ ಚಿತ್ರತಂಡದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಚಿಟ್ಟೆ ಪಾರುಲ್.
ಚಿತ್ರರಂಗ ಸಾಮಾನ್ಯವಾಗಿ ಹೀರೋ ಓರಿಯಂಟೆಡ್. ಹೀಗಾಗಿ ಚಿತ್ರದ ಆಡಿಯೋ, ಮುಹೂರ್ತ.. ಇತ್ಯಾದಿಗಳನ್ನೆಲ್ಲ ನಾಯಕರ ಹುಟ್ಟುಹಬ್ಬದ ದಿನಕ್ಕೆ ಮಾಡ್ತಾರೆ. ಆದರೆ, ಈ ಸಿನಿಮಾದಲ್ಲಿ ನಾಯಕಿಗೆ ಆದ್ಯತೆ ನೀಡಿರುವುದು ವಿಶೇಷ. ಸಿನಿಮಾ ಶುರುವಾಗಿದ್ದೇ ನಾಯಕಿಯ ಹುಟ್ಟುಹಬ್ಬದ ದಿನ. ಈ ವರ್ಷ ಮತ್ತೊಮ್ಮೆ ಅದೇ ಚಿತ್ರತಂಡದೊಂದಿಗೆ ಹುಟ್ಟುಹಬ್ಬ ಆಚರಿಸಿದ್ದು ಖುಷಿ ಕೊಟ್ಟಿದೆ ಎಂದಿದ್ದಾರೆ ಪಾರುಲ್.
ಮನುಕುಮಾರನ್ ಪ್ರಧಾನ ನಿರ್ಮಾಪಕರಾಗಿರುವ ಚಿತ್ರ ಇದು. ಏಕಕಾಲದಕ್ಕೆ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಶೂಟಿಂಗ್ ನಡೆಯುತ್ತಿದೆ. ಇದು ಕ್ವೀನ್ ಚಿತ್ರದ ರೀಮೇಕ್.
ಕನ್ನಡದಲ್ಲಿ ಪಾರುಲ್ ಯಾದವ್, ತಮಿಳಿನಲ್ಲಿ ತಮನ್ನಾ, ತೆಲುಗಿನಲ್ಲಿ ಕಾಜಲ್ ಕ್ವೀನ್ ಆಗಿದ್ದಾರೆ.