ಕೋಟಿಗೊಬ್ಬ 3 ಚಿತ್ರತಂಡ ಜೂನ್ 10ರಿಂದ ವಿದೇಶಗಳಲ್ಲಿ ನಿರಂತರ 40 ದಿನ ಶೂಟಿಂಗ್‍ಗೆ ಸಿದ್ಧವಾಗಿದ್ದರೂ, ಚಿತ್ರದ ಹೀರೋಯಿನ್ ಅಂತಿಮವಾಗಿರಲಿಲ್ಲ. ಸುದೀಪ್‍ಗೆ ಜೋಡಿ ಯಾರು ಅನ್ನೋ ಕುತೂಹಲ ಹಾಗೆಯೇ ಇತ್ತು. ಈಗ ಆ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಕಿಚ್ಚನ ಜೋಡಿಯಾಗುತ್ತಿರುವುದು ಮಡೋನಾ ಸೆಬಾಸ್ಟಿಯನ್. ಪ್ರೇಮಂ ಖ್ಯಾತಿಯ ಬೆಡಗಿ.
ಮಲಯಾಳಂನಿಂದ ಕನ್ನಡಕ್ಕೆ ಬರುತ್ತಿರುವ ಮಡೋನ್ನಾ ಪವರ್‍ಪಾಂಡಿ, ಜುಂಗ ಮೊದಲಾದ ಚಿತ್ರಗಳಲ್ಲೂ ನಟಿಸಿದ್ದಾರೆ. ಮಡೋನಾ ಕನ್ನಡಕ್ಕೆ ಬರುತ್ತಿರುವುದಕ್ಕೆ ಕಾರಣ, ಪವರ್‍ಪಾಂಡಿ ಚಿತ್ರ. ಪವರ್‍ಪಾಂಡಿಯನ್ನ ಸುದೀಪ್ ಕನ್ನಡದಲ್ಲಿ ಅಂಬಿ ನಿಂಗೆ ವಯಸ್ಸಾಯ್ತೋ ಹೆಸರಿನಲ್ಲಿ ಮಾಡುತ್ತಿದ್ದಾರೆ. ತಮಿಳಿನಲ್ಲಿ ಧನುಷ್ ಮಾಡಿದ್ದ ಪಾತ್ರವನ್ನ ಸುದೀಪ್ ಮಾಡುತ್ತಿದ್ದಾರೆ. ಆ ಚಿತ್ರದಲ್ಲಿ ಮಡೋನಾ ಮಾಡಿದ್ದ ಪಾತ್ರವನ್ನ ಕನ್ನಡದಲ್ಲಿ ಶೃತಿ ಹರಿಹರನ್ ಮಾಡುತ್ತಿದ್ದಾರೆ. ಆ ಸಿನಿಮಾ ನೋಡುವಾಗ ಕೋಟಿಗೊಬ್ಬ3ಗೆ ಈಕೆಯೇ ಹೀರೋಯಿನ್ ಆದರೆ ಚೆಂದ ಎಂದು ನಿರ್ದೇಶಕ ಕಾರ್ತಿಕ್, ಸೂರಪ್ಪ ಬಾಬು ಅವರಿಗೂ ಅನ್ನಿಸಿದೆ.
ಕಥೆಗೆ ಸೂಕ್ತವಾದ ಫೇಸ್ ಇದೆ. ಹೋಮ್ಲಿನೆಸ್ ಇದೆ. ಸುದೀಪ್ ಅವರಿಗೆ ಒಳ್ಳೆಯ ಜೋಡಿ ಆಗ್ತಾರೆ. ಈಕೆಯ ನಟನೆಯೂ ಚೆನ್ನಾಗಿದೆ. ನಿರ್ದೇಶಕರು ಹಾಗೂ ಸುದೀಪ್ ಒಪ್ಪಿದ ಮೇಲೆಯೇ ನಾಯಕಿಯನ್ನು ಫೈನಲ್ ಮಾಡಿದೆವು ಎಂದಿದ್ದಾರೆ ಸೂರಪ್ಪ ಬಾಬು.