ಪೈಲ್ವಾನ್. ಹೆಬ್ಬುಲಿ ನಂತರ ನಿರ್ದೇಶಕ ಕೃಷ್ಣ ಮತ್ತು ಸುದೀಪ್ ಮತ್ತೆ ಒಟ್ಟಾಗಿರುವ ಸಿನಿಮಾ. ಚಿತ್ರದಲ್ಲಿ ಸುದೀಪ್ ಬಾಕ್ಸರ್ ಆಗಿ ಕಾಣಿಸುತ್ತಿರುವುದು ಒಂದು ವಿಶೇಷವಾದರೆ, ಸುನಿಲ್ ಶೆಟ್ಟಿ ನಟಿಸುತ್ತಿರುವುದು ಇನ್ನೊಂದು ಬೋನಸ್. ಆದರೆ, ಸುನಿಲ್ ಶೆಟ್ಟಿ ಅವರದ್ದು ವಿಲನ್ ಪಾತ್ರ ಅಲ್ಲವಂತೆ. ಹಾಗಾದರೆ ಮತ್ತೇನು ಎಂದು ಕೇಳಿದರೆ, ಚಿತ್ರದ ಹಲವು ವಿಶೇಷಗಳನ್ನು ಹೊರಹಾಕಿದ್ದಾರೆ ನಿರ್ದೇಶಕ ಕೃಷ್ಣ.
ಸುನಿಲ್ ಶೆಟ್ಟಿ ಅವರದ್ದು ಚಿತ್ರದಲ್ಲಿ ಪ್ರಮುಖ ಪಾತ್ರ. ವಿಲನ್ ಅಲ್ಲ. ಅವರ ಪಾತ್ರ ತುಂಬಾ ಸಾಫ್ಟ್ ಆಗಿದೆ.ಚಿತ್ರದಲ್ಲಿ ಖಳನಟರಾಗಿ ನಟಿಸುತ್ತಿರುವುದು ಕಬೀರ್ ಖಾನ್, ಶಶಾಂಕ್.
ಸುದೀಪ್ ಎರಡು ಶೇಡ್‍ನಲಿ ಕಾಣಿಸಿಕೊಳ್ತಾರೆ. ಒಂದು ಪಾತ್ರ ಸ್ಲಿಮ್ ಆಗಿದ್ದರೆ, ಇನ್ನೊಂದು ಪಾತ್ರ ಜಟ್ಟಿಯದ್ದು. ಹಾಗಂತ ಡಬಲ್ ಆ್ಯಕ್ಟಿಂಗ್ ಅಲ್ಲ.ಚಿತ್ರದ ಬಹುತೇಕ ಚಿತ್ರೀಕರಣ ಸೆಟ್‍ನಲ್ಲಿಯೇ ನಡೆಯಲಿದೆ. ಹೈದರಾಬಾದ್, ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಸೆಟ್ ಹಾಕಲಾಗುತ್ತಿದೆ.