ಕಿಚ್ಚ ಸುದೀಪ್ ಇನ್ನು 40 ದಿನಗಳ ಕಾಲ ಭಾರತದಲ್ಲಿ ಇರುವುದಿಲ್ಲ. ಕಿಚ್ಚ ಸುದೀಪ್‍ರನ್ನು ನೋಡಬೇಕೆಂದರೆ, ಸರ್ಬಿಯಾಗೆ ಹೋಗಬೇಕು ಅಷ್ಟೆ. ಏಕೆಂದರೆ, ಕೋಟಿಗೊಬ್ಬ-3 ಚಿತ್ರತಂಡ ಇನ್ನು 40 ದಿನ ಅಲ್ಲಿಯೇ ಉಳಿಯಲಿದೆ. ಚಿತ್ರದ ಹೀರೋ ಸುದೀಪ್ ಕೂಡಾ ಅಲ್ಲಿಯೇ ಇರಲಿದ್ದಾರೆ. ಸತತ 40 ದಿನ.
ಸುಮಾರು 25ಕ್ಕೂ ಹೆಚ್ಚು ಕಲಾವಿದರು ಹಾಗೂ ತಂತ್ರಜ್ಞರ ತಂಡ ಸರ್ಬಿಯಾದಲ್ಲೇ ಬೀಡುಬಿಡಲಿದೆ. ಜೂನ್ 10ರಂದು ಇಡೀ ಚಿತ್ರತಂಡ ಸರ್ಬಿಯಾಗೆ ಹೊರಡಲಿದೆ. ನಿರ್ಮಾಪಕ ಸೂರಪ್ಪ ಬಾಬು ನಿರ್ಮಾಣದ ಚಿತ್ರಕ್ಕೆ ಕಾರ್ತಿಕ್ ನಿರ್ದೇಶನವಿದೆ. ಚಿತ್ರದ ಮೊದಲ ಹಂತರ ಶೂಟಿಂಗ್‍ನ್ನು ವಿದೇಶದಲ್ಲಿಯೇ ಮುಗಿಸಲು ಚಿತ್ರತಂಡ ನಿರ್ಧರಿಸಿದೆ.