ರಾಕಿಂಗ್ ಸ್ಟಾರ್ ಯಶ್, ಅಂಬರೀಷ್ ಅವರ ದೊಡ್ಡ ಅಭಿಮಾನಿ. ಎಷ್ಟೆಂದರೂ ಮಂಡ್ಯ ಸೀಮೆಯ ಹುಡುಗ. ಅದು ಸಹಜವೇ ಬಿಡಿ. ರಾಜಾಹುಲಿಯಲ್ಲಿ ಅಂಬರೀಷ್ ಅಭಿಮಾನಿಯಾಗಿಯೇ ಕಾಣಿಸಿಕೊಂಡಿದ್ದ ಯಶ್‍ಗೆ ಅಂಬರೀಷ್ ಅವರ ಜಲೀಲನ ಪಾತ್ರವನ್ನು ಮಾಡಬೇಕು ಅನ್ನೋ ಆಸೆಯಿದೆಯಂತೆ.
ನನ್ನನ್ನು ಅತಿ ಹೆಚ್ಚಾಗಿ ಕಾಡೋದು ಜಲೀಲನ ಪಾತ್ರ. ಯಾರಾದರೂ ಆ ಮಾದರಿಯ ಕಥೆ ಮಾಡಿಕೊಂಡು ಬರಲಿ ಎಂದು ಕಾಯುತ್ತಲೇ ಇದ್ದೇನೆ ಎಂದು ಆಸೆ ತೋಡಿಕೊಂಡಿದ್ದಾರೆ ಯಶ್.
ಇದರ ಮಧ್ಯೆ ಕೆಜಿಎಫ್ ಚಿತ್ರಕ್ಕಾಗಿ ಇಷ್ಟುದ್ದ ಗಡ್ಡ ಬಿಟ್ಟಿರುವ ಯಶ್‍ಗೆ ಗಡ್ಡ ತೆಗೆಯುವಂತೆ ಅಂಬರೀಷ್ ಹೇಳಿದ್ದಾರಂತೆ. ಜೂನ್ 20ರ ಡೆಡ್‍ಲೈನ್ ಕೊಟ್ಟಿದ್ದಾರಂತೆ. ಅದಕ್ಕೂ ಮುಂಚೆಯೇ ಗಡ್ಡ ತೆಗೆಯೋದಾಗಿ ಅಂಬರೀಷ್‍ಗೆ ಯಶ್ ಪ್ರಾಮಿಸ್ ಮಾಡಿದ್ದಾರಂತೆ.
ಅಂದಹಾಗೆ.. ಅದರ ಅರ್ಥ ಜೂನ್ 20ರೊಳಗೆ ಕೆಜಿಎಫ್ ಚಿತ್ರದ ಶೂಟಿಂಗ್ ಸಂಪೂರ್ಣ ಮುಗಿಯಲಿದೆ ಎಂದು.