` ರಕ್ಷಿತ್ ಶೆಟ್ಟಿ ಬರ್ತ್‍ಡೇ  777 ಚಾರ್ಲಿ ಗಿಫ್ಟ್  - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rakshit shetty's birthday special
Rakshit Shetty Image

ರಕ್ಷಿತ್ ಶೆಟ್ಟಿ ಈಗ ಅವನೇ ಶ್ರೀಮನ್ನಾರಾಯಣ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿ. ವಿಜಯಪುರದ ಸುತ್ತಮುತ್ತ ನಡೆಯುತ್ತಿರುವ ಚಿತ್ರೀಕರಣದ ನಡುವೆಯೇ ರಕ್ಷಿತ್ ಶೆಟ್ಟಿ ಬಿಡುವು ಮಾಡಿಕೊಳ್ಳುತ್ತಿದ್ದಾರೆ. ಆ ಬಿಡುವಿನಲ್ಲೇ 777 ಚಾರ್ಲಿ ಚಿತ್ರಕ್ಕೆ ರೆಡಿಯಾಗಲಿದ್ದಾರೆ.

ಜೂನ್ 6ನೇ ತಾರೀಕು 777 ಚಾರ್ಲಿ ಚಿತ್ರದ ಮುಹೂರ್ತವೂ ನಡೆಯಲಿದೆ. ಏಕೆಂದರೆ, ಅಂದು ರಕ್ಷಿತ್ ಶೆಟ್ಟಿ ಜನ್ಮದಿನ. ಅಷ್ಟೇ ಅಲ್ಲ, ಅದೇ ದಿನ ಅವನೇ ಶ್ರೀಮನ್ನಾರಾಯಣ ಹಾಗೂ 777ಚಾರ್ಲಿ.. ಎರಡೂ ಚಿತ್ರಗಳ ಫಸ್ಟ್ ಲುಕ್‍ನ್ನೂ ಬಿಡುಗಡೆ ಮಾಡಲು ಚಿತ್ರತಂಡಗಳು ನಿರ್ಧರಿಸಿವೆ. 

ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಅದ್ಧೂರಿ ಸೆಟ್ ಹಾಕಲಾಗುತ್ತಿದ್ದು, ಅದಕ್ಕೆ ಸ್ವಲ್ಪ ಸಮಯ ಬೇಕಿದೆ. ಅವನೇ.. ಚಿತ್ರದ ಸೆಟ್ ರೆಡಿ ಮಾಡುವ ನಡುವೆ ಸಿಗುವ ಗ್ಯಾಪ್‍ನಲ್ಲಿ 777ಚಾರ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ.