ಅಮೆರಿಕ ಹಾಗೂ ಆಸ್ಟ್ರೇಲಿಯಾಗಳಲ್ಲಿ ನಾಳೆ ತೆರೆ ಕಾಣುತ್ತಿರುವ ರ್ಯಾಂಬೋ2 ಸಿನಿಮಾ, ಬಿಡುಗಡೆಗೂ ಮುನ್ನವೇ ದಾಖಲೆ ಬರೆದುಬಿಟ್ಟಿದೆ. ಅಮೆರಿಕದಲ್ಲಿ 40ಕ್ಕೂ ಹೆಚ್ಚು ಸೆಂಟರ್‍ಗಳಲ್ಲಿ ರ್ಯಾಂಬೋ 2 ರಿಲೀಸ್ ಆಗುತ್ತಿದೆ. ವಾಷಿಂಗ್ಟನ್ ಡಿಸಿ, ಲಾಸ್ ಏಂಜಲೀಸ್, ಕನ್ಸಾಸ್ ಸಿಟಿ, ಸ್ಯಾಂಡಿಯಾಗೋ, ಮಿನ್ನೆಪೊಲೀಸ್, ಡೆಟ್ರಾಯ್ಟ್, ಸಾಲ್ಟ್ ಲೇಕ್ ಸಿಟಿ, ಸ್ಯಾಕ್ರಾಮೆಂಟೋ, ಅಟ್ಲಾಂಟಾ, ಮಿಯಾಮಿ, ಫಿಲಿಡಲ್ಫಿಯಾ, ಬಾಲ್ಟಿಮೋರ್ ಹಾಗೂ ಸೀಟಲ್ ನಗರಗಳಲ್ಲಿ ತೆರೆ ಕಾಣುತ್ತಿದೆ. ಕೆನಡಾದಲ್ಲಿಯೂ ಹಲವಾರು ಕಡೆ ಚಿತ್ರ ತೆರೆ ಕಾಣುತ್ತಿದೆ.
ಚಿತ್ರ ನಿರ್ಮಾಪಕರಾದ ಶರಣ್ ಹಾಗೂ ಅಟ್ಲಾಂಟಾ ನಾಗೇಂದ್ರ, ಅಮೆರಿದಕ ಕಸ್ತೂರಿ ಮೀಡಿಯಾ ಹೌಸ್ ಮೂಲಕ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಕೆನಡಾದಲ್ಲಿ ಡ್ರೀಮ್ಸ್ ಮೀಡಿಯಾ ಬಿಡುಗಡೆಯ ಜವಾಬ್ದಾರಿ ತೆಗೆದುಕೊಂಡಿದೆ. ಉತ್ತರ ಅಮೆರಿಕದಲ್ಲಿ ಇದು ಕನ್ನಡ ಚಿತ್ರವೊಂದರ ಅತ್ಯಂತ ಅದ್ಧೂರಿ ಬಿಡುಗಡೆ ಎಂದರೂ ತಪ್ಪಾಗಲ್ಲ.
ಈಗಾಗಲೇ ಕರ್ನಾಟಕದಲ್ಲಿ ಬಾಕ್ಸಾಫೀಸ್ ಮ್ಯಾಜಿಕ್ ಸೃಷ್ಟಿಸಿರುವ ರ್ಯಾಂಬೋ 2, ನಾಳೆಯಿಂದ ಅಮೆರಿಕ, ಆಸ್ಟ್ರೇಲಿಯಾ, ಕೆನಡಾಗಳಲ್ಲು ಚುಟುಚುಟು ಎನ್ನಲಿದೆ. ಶರಣ್, ಅಶಿಕಾ ರಂಗನಾಥ್, ಚಿಕ್ಕಣ್ಣ, ರವಿಶಂಕರ್ ಪ್ರಮುಖ ಪಾತ್ರದಲ್ಲಿರುವ ಸಿನಿಮಾ, ವಿದೇಶದ ಪ್ರೇಕ್ಷಕರಿಗೂ ಇಷ್ಟವಾಗೋದ್ರಲ್ಲಿ ಸಂಶಯವಿಲ್ಲ.