ದ್ವಾರಕೀಶ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಇತಿಹಾಸವನ್ನೇ ಸೃಷ್ಟಿಸಿದ ಕನ್ನಡದ ಕುಳ್ಳ ದ್ವಾರಕೀಶ್, ಈಗ ಇನ್ನೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಆಡಿಯೋ ಸಂಸ್ಥೆ ಕಟ್ಟುವ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ ದ್ವಾರಕೀಶ್. ಈ ಸಾಹಸಕ್ಕೆ ಕೈ ಜೋಡಿಸಿರುವುದು ಸಂಗೀತ ನಿರ್ದೇಶಕ ಗುರುಕಿರಣ್.
ಇಬ್ಬರೂ ಸಹಭಾಗಿತ್ವದಲ್ಲಿ ಡಿಜಿಕೆ ಅನ್ನೋ ಆಡಿಯೋ ಸಂಸ್ಥೆ ಸ್ಥಾಪಿಸಿದ್ದಾರೆ. ದ್ವಾರಕೀಶ್ ಮತ್ತು ಗುರುಕಿರಣ್ ಹೆಸರಿನ ಅಕ್ಷರಗಳೇ ಕಂಪೆನಿಯ ಹೆಸರು. ಈ ಆಡಿಯೋ ಸಂಸ್ಥೆ ಮೂಲಕ ಹೊರ ತಂದಿರುವ ಮೊದಲ ಆಡಿಯೋ ಅಮ್ಮ ಐ ಲವ್ ಯೂ ಚಿತ್ರದ್ದು. ಅದು ಸ್ವತಃ ದ್ವಾರಕೀಶ್ ಬ್ಯಾನರ್‍ನ ಸಿನಿಮಾ. ಅಲ್ಲದೆ ಈ ಚಿತ್ರದ ಸಂಗೀತ ನಿರ್ದೇಶಕ ಸ್ವತಃ ಗುರುಕಿರಣ್. ಶುಭವಾಗಲಿ.
Related Articles :-