` ಅಂಬರೀಷ್ ಪುತ್ರನಿಗಾಗಿ ಭಾರತೀಯ ಚಿತ್ರರಂಗದ ಮಿಲನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
abhishek ambareesh's movie muhurtha
Abhishek, Ambareesh Image

ರೆಬಲ್‍ಸ್ಟಾರ್ ಅಂಬರೀಷ್, ತಮ್ಮ ಹೃದಯವಂತಿಕೆಯಿಂದ ಕನ್ನಡಿಗರನ್ನಷ್ಟೇ ಅಲ್ಲ, ಸಮಸ್ತ ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಗೆಳೆಯರನ್ನು ಸಂಪಾದಿಸಿರುವುದು ಅಂಬರೀಷ್ ಸಾಧನೆ. ನನ್ನ ಜೀವಮಾನದ ಅತಿ ದೊಡ್ಡ ದುಡಿಮೆ ನನ್ನ ಗೆಳೆಯರು ಎಂದು ಅಂಬರೀಷ್ ಹೇಳಿಕೊಳ್ಳುತ್ತಲೇ ಇರುತ್ತಾರೆ. ಈಗ ಅವರ ಮಗ ಅಭಿಷೇಕ್ ಅಭಿನಯದ ಅಮರ್ ಚಿತ್ರಕ್ಕಾಗಿ ಇಡೀ ಭಾರತೀಯ ಚಿತ್ರರಂಗವನ್ನು ಒಟ್ಟಿಗೇ ತರುವ ಆಲೋಚನೆ ನಿರ್ದೇಶಕ ನಾಗಶೇಖರ್ ತಲೆ ಹೊಕ್ಕಿದೆ. ಅಫ್‍ಕೋರ್ಸ್ ಅಂಬರೀಷ್ ಮನಸ್ಸು ಮಾಡಿದರೆ ಅದು ಅಸಾಧ್ಯವೇನೂ ಅಲ್ಲ. ಅದು ನಿರ್ದೇಶಕ ನಾಗಶೇಖರ್ ನಂಬಿಕೆ.

ಅದು ಸಾಧ್ಯವಾದರೆ, ಅಮಿತಾಬ್ ಬಚ್ಚನ್, ಸೂಪರ್ ಸ್ಟಾರ್ ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ, ಮೋಹನ್ ಬಾಬು, ಶತ್ರುಘ್ನ ಸಿನ್ಹಾ... ಮೊದಲಾದವರೆಲ್ಲ ಒಟ್ಟಿಗೇ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕಾಗಿಯೇ ಈಗ ಮುಹೂರ್ತವಾಗಿರುವ ಚಿತ್ರಕ್ಕೆ ಮತ್ತೊಂದು ಮಹಾಮುಹೂರ್ತ ಮಾಡಿದರೆ ಹೇಗೆ ಅನ್ನೋದು ನಿರ್ದೇಶಕ ನಾಗಶೇಖರ್ ಐಡಿಯಾ. ಓಂಶಾಂತಿಓಂ ಚಿತ್ರದಲ್ಲಿದ್ದ ದೀವಾನಗಿ... ಹಾಡಿನ ಮಾದರಿಯಲ್ಲಿಯೇ ಎಲ್ಲ ದಿಗ್ಗಜರನ್ನೂ ಒಟ್ಟಿಗೇ ಸೇರಿಸುವ ಕನಸು ಕಾಣುತ್ತಿದ್ದಾರೆ ನಾಗಶೇಖರ್. 

ಅಂದಹಾಗೆ ಚಿತ್ರದ ಕಥೆ ಬೈಕ್‍ರೇಸ್ ಹಿನ್ನೆಲೆ ಹೊಂದಿದೆ. ಅಮರ್ ಅರ್ಥಾತ್ ಅಭಿಷೇಕ್ ಚಿತ್ರದಲ್ಲಿ ಬೈಕ್ ರೈಡರ್. ನಾಯಕಿ ತಾನ್ಯಾ ಕೂಡಾ ಬೈಕ್ ರೈಡರ್ ಅಂತೆ. 80 ದಿನಗಳ ಚಿತ್ರೀಕರಣಕ್ಕೆ ಪ್ಲಾನ್ ಆಗಿದೆ. ನಾಯಕನಿಗೆ ವಿಲನ್ ಶೇಡ್ ಕೂಡಾ ಇದೆ. ಸ್ಕಾಟ್ಲೆಂಡ್‍ನಲ್ಲೂ ಚಿತ್ರೀಕರಣ ನಡೆಯಲಿದೆ. ಒಟ್ಟಿನಲ್ಲಿ ಇಡೀ ಚಿತ್ರರಂಗ ಕಾಯುತ್ತಿರುವ ಸಿನಿಮಾ ಅಮರ್ ಆಗಲಿದೆ.

India Vs England Pressmeet Gallery

Odeya Audio Launch Gallery