ಹರಿಪ್ರಿಯಾಗೆ ಇತ್ತೀಚೆಗೆ ಅದೃಷ್ಟ ಖುಲಾಯಿಸಿಬಿಟ್ಟಿದೆ. ಚಿತ್ರಗಳ ಸಂಖ್ಯೆಯ ದೃಷ್ಟಿಯಲ್ಲಷ್ಟೇ ಅಲ್ಲ, ವಿಭಿನ್ನ ಪಾತ್ರಗಳಲ್ಲೂ ಅಷ್ಟೆ.. ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳು. ಡಾಟರ್ ಆಫ್ ಪಾರ್ವತಮ್ಮ ಚಿತ್ರದಲ್ಲಿ ತನಿಖಾಧಿಕಾರಿಯ ಪಾತ್ರ ಮಾಡುತ್ತಿರುವ ಹರಿಪ್ರಿಯಾ, ರಗಡ್ ಸ್ಟೈಲ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಜೀಪ್ ಮೇಲೆ ಕುಳಿತಿರುವ ಹರಿಪ್ರಿಯಾ ಅವರ ಲುಕ್ ಮತ್ತು ಸ್ಟೈಲ್ ಡಿಫರೆಂಟ್ ಆಗಿದೆ.
ಅಂದಹಾಗೆ ಈ ಚಿತ್ರದ ಕಾಸ್ಟ್ಯೂಮ್ ಡಿಸೈನರ್ ಕೂಡಾ ಪ್ರಗತಿ ಶೆಟ್ಟಿ. ಬೆಲ್‍ಬಾಟಂ ಚಿತ್ರದಲ್ಲಿನ ಕಾಸ್ಟ್ಯೂಮ್ ಡಿಸೈನ್ ಇಷ್ಟವಾಗಿ ಈ ಚಿತ್ರದಲ್ಲೂ ಅವರೇ ಕಂಟಿನ್ಯೂ ಆಗಿದ್ದಾರೆ. ಶಂಕರ್ ಎಂಬ ಹೊಸ ಹುಡುಗನ ನಿರ್ದೇಶನದ ಚಿತ್ರದಲ್ಲಿ ಪಾರ್ವತಮ್ಮನಾಗಿ ನಟಿಸುತ್ತಿರುವುದು ಸುಮಲತಾ.
ಈಗಾಗಲೇ 15 ದಿನಗಳ ಚಿತ್ರೀಕರಣ ಮುಗಿದಿದೆ. ಅಂದಹಾಗೆ ಇದು ಹರಿಪ್ರಿಯಾ ಅಭಿನಯದ 25ನೇ ಸಿನಿಮಾ.