ಇದು ನನ್ನ ಅತ್ತಿಗೆಯ ಸಿನಿಮಾ. ಖಂಡಿತಾ ಚೆನ್ನಾಗಿ ಬಂದಿರುತ್ತೆ. ಎಲ್ಲರೂ ನೋಡಿ, ಚಿತ್ರವನ್ನು ಬೆಂಬಲಿಸಿ.
ಅತ್ತಿಗೆ ಮೇಘನಾ ರಾಜ್ ನಟಿಸಿರುವ ಇರುವುದೆಲ್ಲವ ಬಿಟ್ಟು.. ಚಿತ್ರದ ಆಡಿಯೋ ಬಿಡುಗಡೆಯಲ್ಲಿ ಧ್ರುವ ಸರ್ಜಾ ಶುಭ ಹಾರೈಸಿದ್ದು ಹೀಗೆ. ಮದುವೆಯ ನಂತರ ಮೇಘನಾರಾಜ್ ಮತ್ತು ಚಿರಂಜೀವಿ ಸರ್ಜಾ ಒಟ್ಟಿಗೇ ಭಾಗವಹಿಸಿದ್ದ ಮೊದಲ ಕಾರ್ಯಕ್ರಮವೂ ಇದೇ ಆಗಿದ್ದುದು ವಿಶೇಷ.
ನನ್ನ ಪತ್ನಿ ನಟಿಸಿರುವ ಸಿನಿಮಾ ಇದು. ಸಿನಿಮಾ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದ್ದು ಚಿರಂಜೀವಿ ಸರ್ಜಾ.
ಸುಂದರ್‍ರಾಜ್, ಪ್ರಮೀಳಾ ಜೋಷಾಯ್, ಚಿರಂಜೀವಿ ಸರ್ಜಾ, ಧ್ರುವ ಸರ್ಜಾ, ಮೇಘನಾ ರಾಜ್.. ಎಲ್ಲರೂ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮದುವೆ ಮನೆಯ ಸಂಭ್ರಮವೇ ಇತ್ತು.