ನವರಸ ನಾಯಕ ಜಗ್ಗೇಶ್, ಪ್ರಧಾನಿ ನರೇಂದ್ರ ಮೋದಿಯವರ ಅಪ್ಪಟ ಅಭಿಮಾನಿ. ಜೊತೆಗೆ ಬಿಜೆಪಿ ಮುಖಂಡರೂ ಹೌದು. ಹೀಗಿರುವಾಗ ಅವರೇಕೆ ಮೋದಿಗೆ ಚಾಲೆಂಜ್ ಹಾಕ್ತಾರೆ ಅಂದ್ಕೊಂಡ್ರಾ..? ಎಲ್ಲ ಫಿಟ್‍ನೆಸ್ ಚಾಲೆಂಜ್ ಮಹಾತ್ಮೆ.
ಮೋದಿಗೆ ಮೊದಲು ಫಿಟ್‍ನೆಸ್ ಚಾಲೆಂಜ್ ಹಾಕಿದ್ದು ವಿರಾಟ್ ಕೊಹ್ಲಿ. ಅದು ಶುರುವಾಗಿದ್ದು ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್‍ರಿಂದ. ಈಗ ಜಗ್ಗೇಶ್ ಸತತವಾಗಿ 50 ಡಿಪ್ಸ್ ಹೊಡೆದು ಫಿಟ್‍ನೆಸ್ ಚಾಲೆಂಜ್ ಹಾಕಿದ್ದಾರೆ.
ಜಗ್ಗೇಶ್ ಬಾಲ್ಯದಿಂದಲೂ ತಪ್ಪದೇ 50 ದಂಡ ಬೈಠಕ್ ಮಾಡ್ತಾರಂತೆ. ಅದರಿಂದ ಇಡೀ ದೇಹ ಹದ್ದುಬಸ್ತಿನಲ್ಲಿರುತ್ತೆ. ಇದನ್ನು ಹಲವು ವರ್ಷಗಳಿಂದಲೂ ಮಾಡಿಕೊಂಡು ಬಂದಿದ್ದೇನೆ. ಆ ಕಾಲದ ಗರಡಿ ಮನೆ ತಾಲೀಮು, ಈಗಿನ 55ನೇ ವಯಸ್ಸಿನಲ್ಲೂ ಮುಂದುವರೆದಿದೆ ಎಂದು ಹೇಳಿಕೊಂಡಿದ್ದಾರೆ ಜಗ್ಗೇಶ್.