ಕಿಚ್ಚ ಸುದೀಪ್ರ ಕನಸಿನ ಕೂಸುಗಳಲ್ಲಿ ಒಂದು ಕರ್ನಾಟಕ ಚಲನಚಿತ್ರ ಕಪ್. ಮೊದಲ ಸೀಸನ್ ಮುಗಿದು 2ನೇ ಸೀಸನ್ ಶುರುವಾಗುವ ಸಮಯ ಹತ್ತಿರವಾಗುತ್ತಿದೆ. ಎಲ್ಲವೂ ಪ್ಲಾನ್ ಪ್ರಕಾರವೇ ನಡೆದರೆ, ಸೆಪ್ಟೆಂಬರ್ನಲ್ಲಿ 2ನೇ ಸೀಸನ್ ಶುರುವಾಗಲಿದೆ. ಈ 2ನೇ ಸೀಸನ್ನಲ್ಲಿ ಅಭಿಮಾನಿಗಳು ಥ್ರಿಲ್ಲಾಗುವಂತ ಇನ್ನೊಂದು ವಿಷಯವೂ ಇದೆ. 2ನೇ ಸೀಸನ್ನಲ್ಲಿ ಬ್ರಿಯಾನ್ ಲಾರಾ, ಹರ್ಷಲ್ ಗಿಬ್ಸ್ರಂತಹ ಖ್ಯಾತನಾಮರು ಕೆಸಿಸಿ ಟೂರ್ನಮೆಂಟ್ನಲ್ಲಿ ಆಡುವ ನಿರೀಕ್ಷೆ ಇದೆ. ಈಗಾಗಲೇ ಈ ಕುರಿತು ಮಾತುಕತೆ ನಡೆದಿವೆಯಂತೆ.
2ನೇ ಸೀಸನ್ನ ಕ್ರಿಕೆಟ್ ಟೂರ್ನಮೆಂಟ್, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆಗಳಿವೆ. ಈ ಟೂರ್ನಮೆಂಟ್ನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಕನಸಿದೆ ಎಂದಿದ್ದ ಸುದೀಪ್, ಆ ಕನಸನ್ನು ನನಸಾಗಿಸುತ್ತಿದ್ದಾರೆ.