` ಅಮ್ಮ ಐ ಲವ್ ಯು ಕಂಪ್ಲೀಟ್ ರೆಡಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
amma i love you ready for relase
Amma I Love You Poster

ಅಮ್ಮ ಐ ಲವ್ ಯು, ದ್ವಾರಕೀಶ್ ಬ್ಯಾನರ್‍ನ ಸಿನಿಮಾ ಸಂಪೂರ್ಣ ಸಿದ್ಧವಾಗಿ ಸೆನ್ಸಾರ್ ಬೋರ್ಡ್ ಎದುರು ಹೋಗಿದೆ. ತಾಯಿಗಾಗಿ, ತಾಯಿಯನ್ನು ರಕ್ಷಿಸಿಕೊಳ್ಳಲಿಕ್ಕಾಗಿ ಮಗನೊಬ್ಬ ಯಾವ ಹಂತಕ್ಕೆ ಹೋಗುತ್ತಾನೆ..? ಏನೇನೆಲ್ಲ ತ್ಯಾಗ ಮಾಡುತ್ತಾನೆ ಅನ್ನೋದು ಚಿತ್ರದ ಕಥೆ. ತಾಯಿಯನ್ನು ಪ್ರೀತಿಸುವ ಪ್ರತಿ ಮಕ್ಕಳಿಗೂ ಇಷ್ಟವಾಗುವಂತ ಕಥೆ ಸಿನಿಮಾದಲ್ಲಿದೆ. ಚಿತ್ರದ ಸಂದೇಶವೂ ಅದೇ..

ಈಗ ಚಿತ್ರದ ಆಡಿಯೋ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ. ಮೇ 28ಕ್ಕೆ ಅಮ್ಮ ಐ ಲವ್ ಯು ಚಿತ್ರದ ಹಾಡುಗಳು ರಿಲೀಸ್ ಆಗಲಿವೆ. ಜೂನ್ 15ಕ್ಕೆ ಚಿತ್ರ ತೆರೆಗೆ ಬರುವ ಸಾಧ್ಯತೆಗಳಿವೆ. 

ಚಿರಂಜೀವಿ ಸರ್ಜಾ ಮಗನಾಗಿ, ಸಿತಾರಾ ತಾಯಿಯಾಗಿ ನಟಿಸಿರುವ ಚಿತ್ರಕ್ಕೆ, ಚೈತನ್ಯ ನಿರ್ದೇಶನವಿದೆ. ಯೋಗಿ ದ್ವಾರಕೀಶ್ ನಿರ್ಮಾಣದ ಚಿತ್ರ, ತಾಯಿ ಮತ್ತು ಮಕ್ಕಳಿಗಾಗಿ.  ಚಿತ್ರದ ಸಂಗೀತ ನಿರ್ದೇಶಕ ಗುರುಕಿರಣ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery