` ಹೀರೋಯಿನ್ ಆಗಬೇಕು ಎಂದುಕೊಂಡು ಆಗಿಯೇಬಿಟ್ಟರು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
radhika preethi talks about her first movie experience
Radhika Preethi Image

ರಾಧಿಕಾ ಪ್ರೀತಿ, ರಾಜನ ರಾಧೆ. ರಾಜಾ ಲವ್ಸ್ ರಾಧೆ ಚಿತ್ರದ ಹೀರೋಯಿನ್. ಈಕೆ ಹೀರೋಯಿನ್ ಆಗಿದ್ದೇ ಆಕಸ್ಮಿಕ. ಆದರೆ, ಹೀರೋಯಿನ್ ಆಗಬೇಕು ಅನ್ನೋದು ಈಕೆಯ ಕನಸಾಗಿತ್ತು. ದೇವಸ್ಥಾನವೊಂದರಲ್ಲಿ ಸಿಕ್ಕ ನಿರ್ದೇಶಕ ಎಸ್.ನಾರಾಯಣ್, ರಾಧಿಕಾ ಅವರ ಫೋಟೋ ತೆಗೆದುಕೊಂಡಿದ್ದರಂತೆ. ನಂತರ ಫೋನ್ ಮಾಡಿ ಸೆಟ್‍ಗೆ ಕರೆದು ಕೆಲವು ದೃಶ್ಯಗಳನ್ನು ನಟಿಸೋಕೆ ಹೇಳಿದರಂತೆ. ರಾಧಿಕಾ ನಟಿಸಿ ತೋರಿಸಿದರು. ನೀನೇ ಹೀರೋಯಿನ್ ಎಂದು ನಾರಾಯಣ್ ಅವರೇ ಹೇಳಿದ್ರೂ, ರಾಧಿಕಾಗೆ ನಂಬೋಕೆ ಆಗಿರಲಿಲ್ಲ. ಕೊನೆಗೆ ಶೂಟಿಂಗ್ ಶುರುವಾದಾಗಲೇ ನಂಬಿಕೆ ಬಂದಿದ್ದು. 

ಪಂಟ ಚಿತ್ರದಲ್ಲಿ ದೃಶ್ಯಗಳನ್ನು ಸ್ವತಃ ನಾರಾಯಣ್ ನಟಿಸಿ ತೋರಿಸುತ್ತಿದ್ದರಂತೆ. ನಾರಾಯಣ್ ಅವರ ಮೂಲಕವೇ ರಾಜ ಲವ್ಸ್ ರಾಧೆ ಚಿತ್ರದ ಅವಕಾಶವೂ ಸಿಕ್ಕಿತು ಎಂದು ಹೇಳಿಕೊಂಡಿದ್ದಾರೆ ರಾಧಿಕಾ ಪ್ರೀತಿ. 

ರಾಧಿಕಾ ಅಭಿನಯದ 2ನೇ ಸಿನಿಮಾ ರಾಜ ಲವ್ಸ್ ರಾಧೆ ಚಿತ್ರ ಇಂದು ರಿಲೀಸ್. ತಮಿಳು,  ತೆಲುಗು ಹಾಗೂ ಒಡಿಯಾ ಚಿತ್ರಗಳಲ್ಲಿ ನಟಿಸಿರುವ ರಾಧಿಕಾ ಪ್ರೀತಿ, ಅಭಿನಯ ಕಲಿತದ್ದು ಕನ್ನಡಿ ಎದುರು.

Mugilpete Shooting Pressmeet In Sakleshpura

Odeya Audio Launch Gallery