ರವಿಶಂಕರ್ ಅಂದ್ರೆ, ಇದು ಆರ್ಮುಗಂ ಕೋಟೆ ಕಣೋ.. ಡೈಲಾಗ್ ನೆನಪಾಗೋದು ಸಹಜ. ಇತ್ತೀಚೆಗೆ ವಿಲನ್ ಪಾತರಗಳಲ್ಲಿಯೇ ಅಬ್ಬರಿಸಿದ್ದ ರವಿಶಂಕರ್, ಮತ್ತೊಮ್ಮೆ ನಗಿಸುವ ಸಲುವಾಗಿ ಬಂದಿದ್ದಾರೆ. ಅದು ರಾಜ ಲವ್ಸ್ ರಾಧೆ ಚಿತ್ರದಲ್ಲಿ. ಈ ಚಿತ್ರದಲ್ಲಿ ರವಿಶಂಕರ್ ನಿರ್ವಹಿಸಿರುವುದು ಕಾಮಿಡಿ ಪಾತ್ರವನ್ನ. ವಿಕ್ಟರಿ, ಅಧ್ಯಕ್ಷ ನಂತರ ಅಂಥಾದ್ದೊಂದು ಡಿಫರೆಂಟ್ ಕಾಮಿಡಿ ಪಾತ್ರದಲ್ಲಿ ರವಿಶಂಕರ್ ನಟಿಸಿರುವುದು ಇದೇ ಮೊದಲು.
ಚಿತ್ರದಲ್ಲಿ ಹೀರೋ ವಿಜಯ್ ರಾಘವೇಂದ್ರ ಅವರಂತೆಯೇ ರವಿಶಂಕರ್ ಕೂಡಾ ಮೆಕ್ಯಾನಿಕ್. ಜೊತೆಗೊಂದು ಪುಡಿ ರೌಡಿಗಳ ಗ್ಯಾಂಗೂ ಇರುತ್ತೆ. ಎಲ್ಲಕ್ಕಿಂತ ಮಿಗಿಲಾಗಿ ಅಣ್ಣಾವ್ರ ಅಭಿಮಾನಿ. ಡಾ.ರಾಜ್ ಕಾರ್ಯಕ್ರಮಗಳಿಗೆ ಹೋಗಿ ಅಲ್ಲಿ ಅಣ್ಣಾವ್ರ ಡೈಲಾಗ್ ಹೇಳಿಕೊಂಡು ಓಡಾಡುವ ಪಾತ್ರ ರವಿಶಂಕರ್ ಅವರದ್ದು. ರವಿಶಂಕರ್ ಅವರು ಈ ಚಿತ್ರದಲ್ಲಿ ಕಾಮಿಡಿ ಕಚಗುಳಿ ಕೊಡ್ತಾರೆ. ಅವರಿದ್ದ ಕಡೆ ನಗುವಿಗೆ ಬರವಿಲ್ಲ ಅನ್ನೋದು ರಾಜ ಲವ್ಸ್ ರಾಧೆಯ ಡೈರೆಕ್ಟರ್ ರಾಜಶೇಖರ್ ಭರವಸೆ.