` ಯು ವಿಲ್ ರಾಕ್ ಮಗಾ - ಸಂತೋಷ್ ಆನಂದ್‍ರಾಮ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
santhosh anandram wishes his friends
Santhosh Anandram Image

ರಾಜ ಲವ್ಸ್ ರಾಧೆ. ಈಗಾಗಲೇ ಚಿತ್ರಮಂದಿರ ತಲುಪಿದೆ. ವಿಜಯ್ ರಾಘವೇಂದ್ರ ಅಭಿನಯದ ಸಿನಿಮಾ ನಿರ್ಮಾಪಕರಾಗಿದ್ದ ಹೆಚ್.ಎಲ್.ಎನ್.ರಾಜು, ಆಗಲೇ ಹೊಸ ಚಿತ್ರಕ್ಕೆ ರೆಡಿಯಾಗಿಬಿಟ್ಟಿದ್ದಾರೆ. ಹೆಸರಘಟ್ಟ ರಾಜು ನಿರ್ಮಾಣದ ಹೊಸ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ನಾಯಕ. ಚಿತ್ರಕ್ಕಿನ್ನೂ ಟೈಟಲ್ ಫಿಕ್ಸ್ ಆಗಿಲ್ಲ. 

ಅಂದಹಾಗೆ ಈ ಚಿತ್ರದ ನಿರ್ದೇಸಕ ವಿಜಯ್ ನಾಗೇಂದ್ರ. ಇವರು ರಾಜಕುಮಾರ ಮತ್ತು ಮಿಸ್ಟರ್ & ಮಿಸಸ್ ರಾಮಾಚಾರಿ ಚಿತ್ರಗಳಿಗೆ ಅಸಿಸ್ಟೆಂಟ್ ನಿರ್ದೇಶಕರಾಗಿದ್ದವರು. ಅಂದ್ರೆ, ನಿರ್ದೇಶಕ ಸಂತೋಷ್ ಆನಂದ್‍ರಾಮ್ ಗೆಳೆಯ.

ತಮ್ಮ ಗೆಳೆಯನ ಮೊದಲ ಸಿನಿಮಾ ಸೂಪರ್ ಸಕ್ಸಸ್ ಆಗಲಿ ಎಂದು ಶುಭ ಹಾರೈಸಿದ್ದಾರೆ ನಿರ್ದಶಕ ಸಂತೋಷ್ ಆನಂದ್‍ರಾಮ್. ತಮ್ಮ ಗೆಳೆಯನಿಗೆ ಬೆನ್ನು ತಟ್ಟಿ ಪ್ರೋತ್ಸಾಹ ಮತ್ತು ಅವಕಾಶ ನೀಡಿದ ಗಣೇಶ್‍ಗೆ ಧನ್ಯವಾದ ಹೇಳಿದ್ದಾರೆ ಸಂತೋಷ್. 

ಯು ವಿಲ್ ರಾಕ್ ಮಗಾ.. ಅದು ಸಂತೋಷ್ ಆನಂದ್‍ರಾಮ್ ಹಾರೈಕೆ.

Kaalidasa Kannada Mestru Movie Gallery

Kabza Movie Launch Gallery