` ಅಚ್ಚಕನ್ನಡದ ನಿರೂಪಕ ಚಂದನ್ ಅಪಘಾತದಲ್ಲಿ ಸಾವು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
 anchor chandan dies in accident
Chandan Image

ಚಂದನ್ ಅಲಿಯಾಸ್ ಚಂದ್ರಶೇಖರ್. ಉದಯ ಟಿವಿ, ಉದಯ ಮ್ಯೂಸಿಕ್, ರಾಜ್ ಮ್ಯೂಸಿಕ್ ಸೇರಿದಂತೆ ಹಲವು ವಾಹಿನಿಗಳಲ್ಲಿ ಆ್ಯಂಕರ್ ಆಗಿದ್ದ ಚಂದನ್, ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಚಂದನ್ ಹಾಗೂ ಗಾಯಕಿ ಸಂತೋಷಿ ಮೃತಪಟ್ಟಿದ್ದಾರೆ. ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಚಂದನ್ ಹಾಗೂ ಸಂತೋಷಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಚಾಲಕ ಹಾಗೂ ಸುನೀತಾ ಎಂಬುವವರಿಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಬೈಲಹೊಂಗಲ ಬಳಿಯಲ್ಲಿ ಕಾರ್ಯಕ್ರಮವೊಂದರ ನಿರೂಪಣೆಗೆ ತೆರಳುತ್ತಿದ್ದ ಚಂದನ್ ಹಾಗೂ ಸಂತೋಷಿ,  ಹಿಂದಿನ ಸೀಟ್‍ನಲ್ಲಿ ಕುಳಿತಿದ್ದರು. ಕಾರ್‍ನ ಏರ್‍ಬ್ಯಾಗ್ ಓಪನ್ ಆಗಿದ್ದರಿಂದ ಚಾಲಕ ಹಾಗೂ ಮುಂದೆ ಕುಳಿತಿದ್ದ ಸುನೀತಾ ಪ್ರಾಣಾಪಾಯದಿಂದ ಪಾರಾದರು.

ಅಚ್ಚಕನ್ನಡದಲ್ಲಿಯೇ ಮಾತನಾಡುತ್ತಿದ್ದ ಚಂದನ್, ತಮ್ಮ ನಿರೂಪಣೆಯಲ್ಲಿ ಎಲ್ಲಿಯೂ ಇಂಗ್ಲಿಷ್ ಬಳಸುತ್ತಿರಲಿಲ್ಲ. ಹೀಗಾಗಿಯೇ ಚಂದನ್ ಅಚ್ಚಕನ್ನಡದ ನಿರೂಪಕ ಎಂದೇ ಖ್ಯಾತರಾಗಿದ್ದರು.

 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery