` ಅಂಬಿ.. ಟೀಂಗೆ ನಿಫಾ ವೈರಸ್ ಭಯ ಇಲ್ಲವಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ambi ninge vaisaito shooting image
Ambi Ninge Vaisaito Shooting In Kerala

ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಶೂಟಿಂಗ್ ಈಗ ಕೇರಳದಲ್ಲಿದೆ. ಕೇರಳದಲ್ಲಿ ಈಗ ನಿಫಾ ವೈರಸ್ ಭಯ. ನಿಫಾ ವೈರಸ್ ಮೊದಲ ಬಲಿ ಪಡೆದಿರುವುದೇ ಕೇರಳದಲ್ಲಿ. ಹೀಗಾಗಿ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರತಂಡ ಕೇರಳದಲ್ಲೇ ಇರೋದ್ರಿಂದ ಇಲ್ಲಿರೋವ್ರಿಗೆ ಟೆನ್ಷನ್ ಶುರುವಾಗಿದೆ. ಸಹಜವಾಗಿಯೇ ಅಭಿಮಾನಿಗಳಲ್ಲಿಯೂ ಒಂದಿಷ್ಟು ಆತಂಕಗಳಿವೆ. ಇವುಗಳಿಗೆಲ್ಲ ಚಿತ್ರತಂಡವೇ ಉತ್ತರ ನೀಡಿದೆ. 

ಆತಂಕಗೊಳ್ಳುವ ಅಗತ್ಯವಿಲ್ಲ. ನಾವು ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಇಡೀ ತಂಡದ ಯಾರೊಬ್ಬರೂ ಈಗ ಹಣ್ಣು, ಜ್ಯೂಸ್ ಕುಡಿಯುತ್ತಿಲ್ಲ. ಪ್ರತಿಯೊಬ್ಬರೂ ಕುದಿಸಿ ಆರಿಸಿದ ನೀರನ್ನೇ ಕುಡಿಯುತ್ತಿದ್ದೇವೆ ಎಂದು ತಿಳಿಸಿದ್ದಾರೆ ಚಿತ್ರದ ನಿರ್ಮಾಪಕ ಜಾಕ್ ಮಂಜು.

ನಿಫಾ ವೈರಸ್ ಬಲಿ ತೆಗೆದುಕೊಂಡ ಜಾಗಕ್ಕೂ, ಶೂಟಿಂಗ್ ಸ್ಪಾಟ್‍ಗೂ 250 ಕಿ.ಮೀ. ಅಂತರವಿದೆ. ಇಲ್ಲಿನ ಜನರೂ ಆರಾಮಾಗಿದ್ದಾರೆ. ಅವರು ಹಣ್ಣು, ಜ್ಯೂಸ್.. ಎಲ್ಲವನ್ನೂ ತಿಂತಾರೆ. ಕುಡೀತಾರೆ. ಅವರಿಗೇ ಭಯ ಇಲ್ಲ ಎಂದು ತಿಳಿಸಿದ್ದಾರೆ ಜಾಕ್ ಮಂಜು.

ಎರಡು ಶಿಫ್ಟ್‍ಗಳಲ್ಲಿ ಕೆಲಸ ಮಾಡುತ್ತಿರುವ ಚಿತ್ರತಂಡ ಶೀಘ್ರದಲ್ಲೇ ಶೂಟಿಂಗ್ ಮುಗಿಸುವ ಉತ್ಸಾಹದಲ್ಲಿದೆ. ಇದಾದ ನಂತರ ಸುದೀಪ್ ಮೇಲೊಂದು ಹಾಡು ಹಾಗೂ ಒಂದು ಫೈಟ್ ಸೀನ್ ಚಿತ್ರೀಕರಣ ಬಾಕಿ ಇರುತ್ತೆ.