ಕ್ರೇಜಿ ಕ್ವೀನ್ ರಕ್ಷಿತಾ, ದಿ ವಿಲನ್ ಚಿತ್ರಕ್ಕೆ ಡಬ್ಬಿಂಗ್ ಆರ್ಟಿಸ್ಟ್ ಆಗಿ ಚಿತ್ರರಂಗಕ್ಕೆ ವಾಪಸ್ ಬಂದಿರೋದು ಗೊತ್ತೇ ಇದೆ. ರಕ್ಷಿತಾ ಅತ್ಯುತ್ತಮವಾಗಿ ಡಬ್ಬಿಂಗ್ ಮಾಡುತ್ತಿದ್ದಾರಂತೆ. ರಕ್ಷಿತಾ ಅವರ ವಾಯ್ಸ್ ಆ್ಯಮಿ ಜಾಕ್ಸನ್ ಪಾತ್ರಕ್ಕೆ ತುಂಬಾನೇ ಸೂಟ್ ಆಗುತ್ತಿದೆಯಂತೆ. ಅಷ್ಟರಮಟ್ಟಿಗೆ ನಿರ್ದೇಶಕ ಪ್ರೇಮ್ ಹ್ಯಾಪಿ. ಆದರೆ, ಪ್ರೇಮ್‍ಗೆ ರಕ್ಷಿತಾ ಅವರನ್ನು ನಿಭಾಯಿಸೋದು ರೆಬಲ್‍ಸ್ಟಾರ್ ಅಂಬರೀಷ್ ಅವರನ್ನು ನಿಭಾಯಿಸುವಷ್ಟೇ ಕಷ್ಟವಾಗಿದೆಯಂತೆ.
ರಕ್ಷಿತಾರನ್ನು ಡಬ್ಬಿಂಗ್ ಆರ್ಟಿಸ್ಟ್ ಆಗಿ ಸಾಕೋದೂ ಒಂದೇ. ರೆಬಲ್‍ಸ್ಟಾರ್ ಅಂಬರೀಷ್ ಅವರನ್ನ ನಿಭಾಯಿಸೋದೂ ಒಂದೇ. ರಕ್ಷಿತಾ ನನ್ನ ಪಾಲಿಗೆ ರೆಬಲ್‍ಸ್ಟಾರ್. ಅವರು ಬಂದಾಗಲೇ ನಾವು ರೆಡಿಯಾಗಿ ಡಬ್ಬಿಂಗ್ ಮಾಡಿಕೊಳ್ಳಬೇಕು. ಆದರೆ, ಡಬ್ಬಿಂಗ್ ಚೆನ್ನಾಗಿ ಮಾಡುತ್ತಿದ್ದಾರೆ. ದಿನಕ್ಕೆ ಎರಡು ಮೂರು ದೃಶ್ಯಗಳಿಗೆ ಡಬ್ಬಿಂಗ್ ಮಾಡುತ್ತಿದ್ದಾರೆ ಅಂತಾರೆ ಪ್ರೇಮ್.